ಉಡುಪಿ: ಜಿಲ್ಲೆಯ ಕಾಪು ನೂತನ ಮಾರಿಗುಡಿಯ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಭಾಗಿಯಾಗಿದ್ದಾರೆ. ಇದೇ ಮೊದಲ ಭಾರಿಗೆ ಉಡುಪಿಗೆ ಕಂಗನಾ ಭೇಟಿ ನೀಡುತ್ತಿದ್ದು ನಟಿಯನ್ನು ನೋಡಲು ನೂರಾರು ಮಂದಿ ಹಾಜರಿದ್ದರು.
Advertisement
ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಾರಿಯಮ್ಮನ ದರ್ಶನ ಪಡೆದ ಬಳಿಕ ಕಂಗನಾ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ಆರ್‌ಎಸ್‌ಎಸ್ ಹಿರಿಯ ಮುಖಂಡ ಬಿಎಲ್ ಸಂತೋಷ್ ಭಾಗಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಕಂಗನಾ ರಣವಾತ್ ಭಾಗಿಯಾಗಿದ್ದಾರೆ.
ಕಂಗನಾ ಹಸಿರು ಬಣ್ಣದ ಸೀರೆ ಉಟ್ಟು ಮುಡಿ ತುಂಬಾ ಮಲ್ಲಿಗೆ ಹೂ ಮುಡಿದಿದ್ದರು ಸಂಪ್ರದಾಯಿಕವಾಗಿ ರೆಡಿಯಾಗಿ ದೇವಸ್ಥಾನಕ್ಕೆ ಬಂದಿದ್ದರು. ಇದರ ಜೊತೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು ಪತ್ನಿಯೊಂದಿಗೆ ಪ್ರತಿಷ್ಠಾ ಬ್ರಹ್ಮಕಲದ ಸಂದರ್ಭದಲ್ಲಿ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.