ಪುನೀತ್ ರಾಜ್ ಕುಮಾರ್ ನಟನೆಯ ಜಾಕಿ ಸಿನಿಮಾದಲ್ಲಿ ನಟಿಸಿದ್ದ ನಟಿ ಭಾವನಾ ಮೆನೆನ್ ಕನ್ನಡಿಗರಿಗೂ ಚಿರ ಪರಿಚಿತ. ಏಳು ವರ್ಷಗಳ ಹಿಂದೆ ಕನ್ನಡ ನಿರ್ಮಾಪಕ ನವೀನ್ ಅವರನ್ನು ಕೈಹಿಡಿದು ಬೆಂಗಳೂರಿನಲ್ಲೇ ನೆಲೆಸಿರುವ ಭಾವನಾ ಇದೀಗ ಅಸಮಾಧಾನಗೊಂಡಿದ್ದಾರೆ. ತಮ್ಮ ವೈಯಕ್ತಿಯ ಜೀವನದ ಬಗ್ಗೆ ಮಾತನಾಡಿದವರಿಗೆ ನಟಿ ತಿರುಗೇಟು ನೀಡಿದ್ದಾರೆ.
ಗಣೇಶ್ ನಟನೆಯ ರೋಮಿಯೋ ಸಿನಿಮಾದಲ್ಲಿ ಭಾವನ ನಟಿಸಿದ್ದರು. ಈ ಸಿನಿಮಾದ ಚಿತ್ರೀಕರಣದ ವೇಳೆ ನಿರ್ಮಾಪಕ ನವೀನ್ ಅವರೊಂದಿಗೆ ಸ್ನೇಹವಾಗಿ ಬಳಿಕ ಪ್ರೀತಿಗೆ ತಿರುಗಿ ಏಳು ವರ್ಷಗಳ ಹಿಂದೆ ಇಬ್ಬರು ಸಿಂಪಲ್ ಆಗಿ ಮದುವೆಯಾಗಿದ್ದರು. ಈವರ ಡಿವೋರ್ಸ್ ಬಗ್ಗೆ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿ ಹರಿದಾಡುತ್ತದೆ. ಭಾವನಾ- ನವೀನ್ ದೂರಾಗುತ್ತಾರೆ ಎನ್ನುವ ಅರ್ಥದಲ್ಲಿ ಕೂಡ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ಹರಿದಾಡಿತ್ತು. ಇಂತಹ ವದಂತಿಗಳ ಬಗ್ಗೆ ನಟಿ ಭಾವನಾ ಮೆನನ್ ಪ್ರತಿಕ್ರಿಯಿಸಿದ್ದಾರೆ.
ಡಿವೋರ್ಸ್ ವದಂತಿಗಳು ಕೇಳಿ ಬಂದಾಗ ಅದನ್ನು ಹೇಗೆ ಸ್ವೀಕರಿಸುತ್ತೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ, “ದಿನಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವಂತಹ ಜೋಡಿ ನಾವಲ್ಲ. ನೀನು ನನ್ನ ಪ್ರೀತಿ, ಮುದ್ದು ಅಂತೆಲ್ಲಾ ಕ್ಯಾಪ್ಷನ್ ಕೊಡಲ್ಲ. ಬಹಳ ವಿಚಿತ್ರವಾಗಿರುತ್ತದೆ. ಅಪ್ಪಿ ತಪ್ಪಿ ನಾನು ಯಾವುದಾದರೂ ಫೋಟೊ ಹಾಕಿದರೆ ಅಯ್ಯೋ ಇದು ಹಳೇ ಫೋಟೊ, ಈಗ ಇಬ್ಬರ ನಡುವೆ ಏನೋ ಪ್ರಾಬ್ಲಂ ಇದೆ ಎಂತೆಲ್ಲಾ ಕಾಮೆಂಟ್ ಮಾಡ್ತಾರೆ. ನಾನೇ ರಿಪ್ಲೇ ಮಾಡಿ, ಅಯ್ಯೋ ನಾವು ದಿನ ಫೋಟೊ ತಗೋಳ್ಳಲ್ಲ ಎನ್ನುತ್ತೇನೆ”
“ತಾಯಿ, ಅಣ್ಣ, ತಮ್ಮ ಹೀಗೆ ಎಲ್ಲರ ಜೊತೆ ದಿನಾ ಫೋಟೊ ತೆಗೆದುಕೊಂಡು ಕೂರೋಕೆ ಆಗುತ್ತಾ? ಎಲ್ಲವನ್ನು ಸೋಶಿಯಲ್ ಮೀಡಿಯಾ, ಅಥವಾ ಪಬ್ಲಿಕ್‌ನಲ್ಲಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ಆ ರೀತಿ ಕಾಮೆಂಟ್ ಮಾಡುವುದು ಅವರ ಸ್ವಾತಂತ್ರ್ಯ, ಏನು ಮಾಡೋಕೆ ಆಗೊಲ್ಲ. ನಾನು, ನವೀನ್ ಚೆನ್ನಾಗಿದ್ದೀವಿ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೀತಿದೆ. ನಾವು ಚೆನ್ನಾಗಿದ್ದೀವಿ ಎಂದು ಅದನ್ನು ಸಾಬೀತುಪಡಿಸೋಕೆ ಫೋಟೊ ಹಾಕುತ್ತಾ ಕೂರುವುದಕ್ಕೆ ಆಗಲ್ಲ” ಎಂದು ಭಾವನಾ ಸ್ಪಷ್ಟಪಡಿಸಿದ್ದಾರೆ. ಜೀವನದಲ್ಲಿ ಯಾರನ್ನು ಸುಲಭವಾಗಿ ನಂಬಬಾರದು ಎಂದು ನಾನು ಕಲಿತ್ತಿದ್ದೇನೆ ಜೀವನವೇ ಅಂತಹ ಪಾಠಗಳನ್ನು ಕಲಿಸಿದೆ. ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ಪಾಠ ಕಲಿಯಬೇಕು, ಈ ವಿಚಾರದಲ್ಲಿ ಬೇರೆಯವರಿಗೆ ಸಲಹೆ ಕೊಡುವುದಕ್ಕೆ ಸಾಧ್ಯವಿಲ್ಲ. ಅವರವರ ಜೀವನ ಬೇರೆ ಬೇರೆ ರೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಅವರು ಅದನ್ನು ನಿಭಾಯಿಸಬೇಕು ಎಂದು ಭಾವನಾ ಹೇಳಿದ್ದಾರೆ.