ಸ್ಯಾಂಡಲ್ ವುಡ್ ನಟಿ ಭಾವನಾ ರಾಮಣ್ಣ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ದುರ್ವಿಧಿ ಎಂದರೆ ಎರಡರಲ್ಲಿ ಒಂದು ಹೆಣ್ಣು ಮಗು ಮೃತಪಟ್ಟಿದ್ದು ಮತ್ತೊಂದು ಮಗು ಆರೋಗ್ಯವಾಗಿದ್ದಾರೆ.
ಅವಧಿಗೂ ಮುನ್ನವೇ ಭಾವನಾ ರಾಮಣ್ಣ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭಾವನಾ ಅವರಿಗೆ 7 ತಿಂಗಳ ಪೂರ್ಣಗೊಳಿಸುತ್ತಿದ್ದಂತೆಯೇ ಒಂದು ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯಂತೆ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಈ ವೇಳೆ ಒಂದು ಮಗು ಮೃತಪಟ್ಟಿದೆ. ಇದೀಗ ಹೆಣ್ಣು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
40 ವರ್ಷದ ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯಿಯಾಗುವ ಸಂಭ್ರಮದಲ್ಲಿದ್ದು ಇದೀಗ ಮುದ್ದಾಗ ಮಗುವಿನ ತಾಯಿಯಾಗಿದ್ದಾರೆ. ಮದುವೆಯಾಗದೆ ಸಿಂಗಲ್ ಮದರ್ ಅನಿಸಿಕೊಳ್ಳುತ್ತಿರುವ ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿದ್ದರುದ. ಆದರೆ ಆರೋಗ್ಯ ಸಮಸ್ಯೆಯಿಂದ ಒಂದು ಮಗು ಮೃತಪಟ್ಟಿದೆ. ಮತ್ತೊಂದು ಮಗು ಆರೋಗ್ಯವಾಗಿದ್ದು ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.



