ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 53 ವರ್ಷ ವಯಸ್ಸಾಗಿತ್ತು. ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಪೋಲೋ ಪಂದ್ಯ ಆಡುತ್ತಿದ್ದಾಗ ಹೃದಯಾಘಾತದಿಂದ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಂದ ಹಾಗೆ ಸಂಜಯ್ ಅವರಿಗೆ ಹೃದಯಾಘಾತ ಆಗಲು ಕಾರಣವಾಗಿದ್ದು ಅದೊಂದು ಜೇನು ನೋಣ.
ಹೌದು. ಸಂಜಯ್ ಪೋಲೋ ಆಡುತ್ತಿದ್ದಾಗ ಆಕಸ್ಮಿಕವಾಗಿ ಜೇನುನೊಣವೊಂದು ಅವರ ಬಾಯಿಗೆ ಹೋಗಿದೆ. ಈ ವೇಳೆ ಅದನ್ನು ತಿಳಿಯದೆ ಸಂಜಯ್ ನುಂಗಿದ್ದಾರೆ. ಇದರಿಂದ ಸಂಜಯ್ ಅವರಿಗೆ ಹೃದಯಾಘಾತ ಉಂಟಾಯಿತು ಎಂದು ಹೇಳಲಾಗುತ್ತಿದೆ.
ಅಹಮಾದಾಬಾದ್ ನ ವಿಮಾನ ದುರಂತದ ಬಗ್ಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಂಜಯ್ ಕಪೂರ್ ಕೊನೆಯುಸಿರೆಳೆದಿದ್ದಾರೆ. ‘ಅಹಮಾದಾಬಾದ್ನ ವಿಮಾನ ಅಪಘಾತ ಕೆಟ್ಟ ಸುದ್ದಿ. ದುರಂತದಿಂದ ತೊಂದರೆಗೆ ಒಳಗಾದ ಎಲ್ಲಾ ಕುಟುಂಬದವರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ಶಕ್ತಿ ಸಿಗಲಿ’ ಎಂದು ಸಂಜಯ್ ಕಪೂರ್ ಟ್ವೀಟ್ ಮಾಡಿದ್ದರು.