ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕೀರ್ತಿ ಸುರೇಶ್

0
Spread the love

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರನ್ನು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್​ನಲ್ಲಿ ವರಿಸಿದ್ದಾರೆ.

Advertisement

ನಟಿ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯನನ್ನೇ ಮದುವೆ ಆಗಿದ್ದಾರೆ. ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಇಬ್ಬರು ಕ್ಲಾಸ್​​ಮೇಟ್ಸ್​ ಆಗಿದ್ದು ಸುಮಾರು 15 ವರ್ಷಗಳ ಗೆಳೆತನ. ಒಟ್ಟಿಗೆ ಹೈಸ್ಕೂಲ್​​ನಲ್ಲಿ ಓದಿದ್ರು. ಇದು ಹಲವು ವರ್ಷಗಳಿಂದ ಈ ಇಬ್ಬರು ಪ್ರೀತಿ ಮಾಡುತ್ತಿದ್ದರು. ಕುಟುಂಬಸ್ಥರ ಒಪ್ಪಿಗೆ ಮೆರೆಗೆ ನಟಿ ಕೀರ್ತಿ ಸುರೇಶ್​ ಹಾಗೂ ಆಂಟೊನಿ ತಟ್ಟಿಲ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್​ನಲ್ಲಿ ಆಂಟನಿ ತಟ್ಟಿಲ್ ಕೀರ್ತಿ ಸುರೇಶ್​ಗೆ ಕುಟುಂಬಸ್ಥರ ಸಮ್ಮುಖದಲ್ಲಿ ಹಾಗೂ ಆತ್ಮೀಯರ ಮುಂದೆ ತಾಳಿ ಕಟ್ಟಿದ್ದಾರೆ.

ಆಂಟೊನಿ ತಟ್ಟಿಲ್ ಮೂಲತಃ ಕೇರಳದ ಕೊಚ್ಚಿಯವರು. ದುಬೈನಲ್ಲಿ ಇವರದ್ದು ಹಲವು ಬ್ಯುಸಿನೆಸ್​ ಇದೆ. ಹುಟ್ಟಿದ್ದು ಕೇರಳದಲ್ಲಾದ್ರೂ ಬೆಳೆದಿದ್ದು ಮಾತ್ರ ಚೆನ್ನೈನಲ್ಲೇ.ಸದ್ಯ ಆಂಟೊನಿ ತಟ್ಟಿಲ್ ದುಬೈನಲ್ಲಿ ನೆಲೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here