ರಾಜಕಾರಣಿಗಳ ಜೊತೆ ‘ಡೇಟಿಂಗ್’ಗೆ ಒತ್ತಾಯ: ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ ನಟಿ ನಮ್ರತಾ ಗೌಡ

0
Spread the love

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ, ನಟಿ ನಮ್ರತಾ ಗೌಡ ಅವರಿಗೆ ಆನ್​ಲೈನ್​​ನಲ್ಲಿ ಕಿರುಕುಳ ಎದುರಾಗಿದ್ದು ಈ ಬಗ್ಗೆ ನಟಿ ಆಕ್ರೋಶ ಹೊರ ಹಾಕಿದ್ದಾರೆ. ರೋಷನ್ ಹೆಸರಿನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡಗೆ ಸಂದೇಶ ಕಳಿಸಿದ್ದು, ರಾಜಕಾರಣಿಗಳೊಟ್ಟಿಗೆ ‘ಪೇಯ್ಡ್’ ಡೇಟಿಂಗ್​ಗೆ ಒತ್ತಾಯಿಸಿದ್ದಾನೆ. ಪದೇ ಪದೇ ಸಂದೇಶ ಕಳಿಸಿ ಕಿರುಕುಳ ನೀಡಿದದ್ದು ರೋಷನ್ ತಮಗೆ ಕಳಿಸಿರುವ ಸಂದೇಶಗಳನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ನಟಿ ನಮ್ರತಾ ಗೌಡ ಅದನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಗೆ ಹಾಕಿ ಸಾಕಿನ್ನು ನಿಲ್ಲಿಸಿ ಎಂದಿದ್ದಾರೆ.

Advertisement

ರೋಷನ್ ಎಂಬಾತ, ರಾಕಿ ಜಿ43 (Rocky.g43) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಿಂದ ನಮ್ರತಾಗೆ ಸಂದೇಶಗಳನ್ನು ಕಳಿಸಿದ್ದಾನೆ. ರೋಷನ್ ಪ್ರೊಫೈಲ್ ಪಿಕ್ಚರ್​ನಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ತೆಗೆಸಿಕೊಂಡಿರುವ ಫೋಟೊ ಇದೆ. ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟು ಇದ್ದು, ರಾಜಕಾರಣಿಗಳ ಜೊತೆಗೆ ಡೇಟಿಂಗ್​ಗೆ ಬರಲು ಇಚ್ಛೆ ಇದೆಯಾ? ಎಂದು ರೋಷನ್ ನಮ್ರತಾರನ್ನು ಕೇಳಿದ್ದಾನೆ. ‘ಡೇಟಿಂಗ್​’ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ರೋಷನ್ ಒತ್ತಾಯಿಸಿದ್ದಾನೆ.

‘ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್​ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್​ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ, ನಿನ್ನ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ’ ಎಂದು ರೋಷನ್, ನಮ್ರತಾಗೆ ಸಂದೇಶ ಕಳಿಸಿದ್ದಾನೆ. ಇದೇ ಸಂದೇಶವನ್ನು ಎರಡು ಮೂರು ಬಾರಿ ನಮ್ರತಾ ಅವರಿಗೆ ರೋಷನ್ ಕಳಿಸಿದ್ದಾನೆ.

ನಟಿಯರಿಗೆ ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿಯರಿಗೆ, ಸಿನಿಮಾ ಹಿನ್ನೆಲೆ ಇಲ್ಲದೆ ಮಧ್ಯಮ ವರ್ಗದ ಕುಟುಂಬದಿಂದ ಬಂದು ಸ್ವಂತ ಬಲದಿಂದ ಚಿತ್ರರಂಗ, ಟಿವಿ ಲೋಕದಲ್ಲಿ ಹೆಸರು ಮಾಡಿದ ನಟಿಯರಿಗೆ ಈ ರೀತಿಯ ಕಿರುಕುಳ, ಹೈಟೆಕ್ ವೇಶ್ಯಾವಾಟಿಕೆಗೆ ಒತ್ತಾಯಗಳು ಬರುತ್ತಲೇ ಇರುತ್ತವೆ. ಕೆಲವರು ಸೈಲೆಂಟ್‌ ಆಗಿದ್ದರೆ ಹಲವರು ಇದರ ಬಗ್ಗೆ ಬಹಿರಂಗವಾಗಿ ಹೇಳುತ್ತಾರೆ.


Spread the love

LEAVE A REPLY

Please enter your comment!
Please enter your name here