ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಟಿ ಇದೀಗ ಅಭಿಮಾನಿಯ ಕೆನ್ನೆಗೆ ಭಾರಿಸಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ರಾಗಿಣಿ ಅಭಿಮಾನಿಯ ಮೇಲೆ ರಾಂಗ್ ಆಗಿದ್ದು ಯಾಕೆ ಗೊತ್ತಾ?
ಇತ್ತೀಚೆಗೆ ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಇದೇ ವೇಳೆ ಅಭಿಮಾನಿಯೊಬ್ಬ ಏಕಾಏಕಿ ನಟಿಯ ಕೈಯನ್ನು ಹಿಡಿದುಕೊಂಡಿದ್ದಾನೆ. ಇದಕ್ಕೆ ಸಿಟ್ಟಾದ ನಟಿ ಆತನ ಕೆನ್ನೆಗೆ ಬಾರಿಸಿದ್ದಾರೆ.
ಅಭಿಮಾನಿಯ ಕೆನ್ನೆಗೆ ಭಾರಿಸಿದ ರಾಗಿಣಿ ಬಳಿಕ ಎಲ್ಲರ ಮುಂದೆ ಆತನ ಸಿಟ್ಟಾಗಿ ಕುಗಾಡಿದ್ದಾಎರ. ನಂತರ ಅಲ್ಲಿನ ಸಿಬ್ಬಂದಿಗಳು ಆತನನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದು ಪರಿಸ್ಥಿತಿ ತಿಳಿಯಾಗಿದೆ. ಸದ್ಯ ಅಭಿಮಾನಿಯ ಮೇಲೆ ರಾಗಿಣಿ ಕೈ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.