ಮೋಹಕ ತಾರೆ ನಟಿ ರಮ್ಯಾ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ದೂರ ಉಳಿದಿದ್ದಾರೆ. ನಟಿ ಚಿತ್ರರಂಗ ತೊರೆದು ಸಾಕಷ್ಟು ವರ್ಷಗಳೇ ಆಗಿದೆ. ಆದ್ರೆ ಮತ್ತೆ ಈಕೆಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ರಮ್ಯಾ ವಿದೇಶದಲ್ಲಿ ಗೆಳೆಯರ ಜೊತೆ ಬರ್ತಡೇ ಆಚರಿಸಿಕೊಂಡಿದ್ದಾರೆ.
ನಟಿ ರಮ್ಯಾ ಪ್ರತಿ ಭಾರಿ ತಮ್ಮ ಹುಟ್ಟುಹಬ್ಬವನ್ನು ಬೇರೆ ಬೇರೆ ದೇಶಗಳಲ್ಲಿ ಸೆಲೆಬ್ರೇಟ್ ಮಾಡುತ್ತಾರೆ. ಅಂತೆಯೇ ಈ ಬಾರಿ ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಗೆಳೆಯರ ಜೊತೆ ಸುತ್ತಾಡಿ ಕಾಲ ಕಳೆದಿದ್ದಾರೆ.
ಸಾಮಾನ್ಯವಾಗಿ ರಮ್ಯಾ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುವುದಿಲ್ಲ. ಅಂತೆಯೇ ಈ ಭಾರಿ ರಮ್ಯಾ ಸ್ನೇಹಿತೆಯರು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಮ್ಯಾ ಕೀನ್ಯಾದಲ್ಲಿ ಬರ್ತಡೇ ಆಚರಿಸಿಕೊಂಡಿದ್ದಾರೆ ಎಂಬ ವಿಷಯವನ್ನು ಅವರ ಗೆಳೆಯರು ಫೋಟೋ ಮೂಲಕ ತಿಳಿಸಿದ್ದಾರೆ.
ರಮ್ಯಾ ಅವರು ಆಪ್ತ ವಲಯದಲ್ಲಿರುವ ಸಂಜೀವ್ ಮೋಹನ್ ಎಂಬುವವರು ಅವರ ಫೋಟೋನ ಪೋಸ್ಟ್ ಮಾಡಿದ್ದಾರೆ. ರಮ್ಯಾ ಅವರಿಗೆ ಸಂಜೀವ್ ಜೊತೆ ಒಳ್ಳೆಯ ಗೆಳೆತನ ಇದೆ. ಈ ಮೊದಲಿನಿಂದಲೂ ಸಂಜೀವ್ ಅವರು ಇನ್ಸ್ಟಾಗ್ರಾಮ್ನಲ್ಲಿ ರಮ್ಯಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ಹಂಚಿಕೊಂಡಿರೋ ಫೋಟೋ ಗಮನ ಸೆಳೆದಿದೆ.
‘ಹ್ಯಾಪಿ ಬರ್ತ್ಡೇ ದಿವು. ಯಾವಾಗಲೂ ಪ್ರೀತಿಸುತ್ತೇನೆ. ನಿಮ್ಮ ಜೊತೆ ಇರೋದು ಯಾವಾಗಲೂ ಸುಂದರವಾಗಿರುತ್ತದೆ’ ಎಂದು ಸಂಜೀವ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಮಸಾಯಿ ಮಾರ, ಕೀನ್ಯಾ ಎಂದು ಲೊಕೇಶನ್ ನೀಡಿದ್ದಾರೆ. ಸದ್ಯ ಸಂಜೀವ್ ಅವರು ಕೀನ್ಯಾದಲ್ಲಿಯೇ ಇದ್ದು ನಟಿಯ ಬರ್ತಡೇಯಲ್ಲಿ ಭಾಗಿಯಾಗಿದ್ದಾರೆ.