ಶ್ವಾನದ ಕಥೆ ಇರುವ ‘ಪಪ್ಪಿ’ ಸಿನಿಮಾ ಬಿಡುಗಡೆ ಆಗಿದೆ ಶ್ವಾನಪ್ರಿಯರಿಗೆ ಸಿನಿಮಾ ಸಖತ್ ಇಷ್ಟವಾಗಿದೆ. ಇದೀಗ ಚಿತ್ರವನ್ನು ಮೆಚ್ಚಿಕೊಂಡಿರುವ ನಟಿ ರಮ್ಯಾ ಚಿತ್ರದಲ್ಲಿ ನಟಿಸಿಉರುವ ಬಾಲನಟರಿಗೆ ಸೈಕಲ್ ಗಿಫ್ಟ್ ನೀಡಿದ್ದಾರೆ.
‘ಪಪ್ಪಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದಾಗಲೇ ನಟಿ ರಮ್ಯಾ ಅವರು ಟ್ರೈಲರ್ ಅನ್ನೂ ಸಖತ್ ಇಷ್ಟಪಟ್ಟಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು. ಇದೀಗ ಮೇ 1ರಂದು ‘ಪಪ್ಪಿ’ ಸಿನಿಮಾ ಬಿಡುಗಡೆ ಆಗಿದ್ದು, ಶ್ವಾನ ಸೇರಿದಂತೆ ಈ ಸಿನಿಮಾದಲ್ಲಿ ಅಭಿನಯಿಸಿರುವ ಮಕ್ಕಳ ಪ್ರತಿಭೆಗೆ ರಮ್ಯಾ ಮನ ಸೋತಿದ್ದಾರೆ. ಹಾಗಾಗಿ ಬಾಲನಟರ ಇಷ್ಟದಂತೆ ಅವರಿಗೆ ಸೈಕಲ್ ಗಿಫ್ಟ್ ಮಾಡಿದ್ದಾರೆ.
ರಮ್ಯಾ ಅವರು ಹೊಸಬರಿಗೆ ಯಾವಾಗಲೂ ಬೆಂಬಲ ನೀಡುತ್ತಾರೆ. ‘ಪಪ್ಪಿ’ ಸಿನಿಮಾದಲ್ಲಿ ಬಾಲ ಕಲಾವಿದರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರ ನಟನೆ ರಮ್ಯಾಗೆ ಇಷ್ಟ ಆಗಿದೆ. ಮಕ್ಕಳ ಅಭಿನಯಕ್ಕೆ ಮನಸೋತ ರಮ್ಯಾ ಅವರು ಸ್ವತಃ ತಾವೇ ಬಂದು ಮಕ್ಕಳಿಗೆ ಸೈಕಲ್ ಕೊಡಿಸಿದ್ದಾರೆ.
ಹಲವು ಕಾರಣಗಳಿಂದ ‘ಪಪ್ಪಿ’ ಸಿನಿಮಾ ಗಮನ ಸೆಳೆಯುತ್ತಿದೆ. ಅಪ್ಪಟ ಉತ್ತರ ಕರ್ನಾಟಕದ ಭಾಷೆಯ ಸಂಭಾಷಣೆ ಈ ಸಿನಿಮಾದಲ್ಲಿದೆ. ಕಾಮಿಡಿ ಮತ್ತು ಎಮೋಷನ್ ಬೆರೆತ ಕಹಾನಿ ಈ ಚಿತ್ರದಲ್ಲಿದೆ. ರಮ್ಯಾ ಅವರು ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಧ್ರುವ ಸರ್ಜಾ ಅರ್ಪಿಸಿರುವ ‘ಪಪ್ಪಿ’ ಚಿತ್ರಕ್ಕೆ ಆಯುಷ್ ಮಲ್ಲಿ ಅವರು ನಿರ್ದೇಶನ ಮಾಡಿದ್ದಾರೆ.