ಆಗ ಡಿಸಿಎಂ ಡಿಕೆಶಿ ಪರ ಮಾತಾನಾಡಿ ಈಗ ಉಲ್ಟಾ ಹೊಡೆದ ನಟಿ ರಮ್ಯಾ?

0
Spread the love

16ನೇ ಬೆಂಗಳೂರು ಫಿಲ್ಮ್​ ಫೆಸ್ಟಿವಲ್ ನಲ್ಲಿ ಡಿಸಿಎಂ ಡಿಕೆಶಿ ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಡಿಕೆಶಿ ಹೇಳಿಕೆಗೆ ಹಲವರು ಕಿಡಿ ಕಾರಿದ್ದಾರೆ. ಈ ಹಿಂದೆ ನಟಿ ರಮ್ಯಾ ಡಿಕೆಶಿ ಪರ ಮಾತಾನಾಡಿ ಇದೀಗ ಉಲ್ಟಾ ಹೊಡೆದಿದ್ದಾರೆ.

Advertisement

ಬೆಂಗಳೂರು ಫಿಲ್ಮ್​ ಫೆಸ್ಟಿವಲ್ ಉದ್ಘಾಟನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ನಟ್ಟು ಬೋಲ್ಟ್​ ಟೈಟ್ ಹೇಳಿಕೆ ವಿವಾದದ ಅಲೆಯನ್ನೇ ಎಬ್ಬಿಸಿದೆ. ನಟರಿಗೆ ಡಿಕೆ ಶಿವಕುಮಾರ್ ಕೊಟ್ಟ ವಾರ್ನಿಂಗ್​ ಇದೀಗ ಕನ್ನಡ ಚಿತ್ರರಂಗ ಹಾಗೂ ಸರ್ಕಾರದ ನಡುವೆ ಕಿಚ್ಚು ಹಚ್ಚಿಸಿದೆ. ಕಾಂಗ್ರೆಸ್ ನಾಯಕರು ಡಿಸಿಎಂ ಹೇಳಿದ್ದೆ ಸರಿ ಎನ್ನುತ್ತಿದ್ದಾರೆ ಚಿತ್ರರಂಗದವರು ಡಿಕೆಶಿ ಹೇಳಿಕೆಗೆ ಕಿಡಿ ಕಾರ್ತಿದ್ದಾರೆ. ಈ ಮಧ್ಯೆ ಮಾಜಿ ಸಂಸದೆ, ಕಾಂಗ್ರೆಸ್​ ನಾಯಕಿ ಹಾಗೂ ನಟಿ ರಮ್ಯಾ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ರು. ನಿನ್ನೆ ಡಿಸಿಎಂ ಸಾಹೇಬ್ರು ಹೇಳಿದ್ದೇ ಸರಿ ಎಂದಿದ್ದ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ, ಇಂದು ಉಲ್ಟಾ ಹೊಡೆದಿದ್ದಾರೆ.

ಸಮಾಜದ ಸಮಸ್ಯೆಗಳ ಬಗ್ಗೆ ಮಾತಾಡುವಾಗ ಡಿಸಿಎಂ ಡಿಕೆ ಶಿವಕುಮಾರ್ ಸರ್​ ಹೇಳಿದ್ದು ನನಗೆ ಸರಿ ಎನಿಸಿದೆ ಎಂದ್ರು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ನಟರಾಗಿ ನಮಗೆ ಸರಿ ಅನಿಸುವ ವಿಚಾರದ ಬಗ್ಗೆ ಮಾತಾಡೋದು ಮುಖ್ಯವಾಗಿದೆ ಎಂದು ರಮ್ಯಾ ಹೇಳಿದ್ರು.

ಅದು ಯಾವುದೇ ವಿಷಯದ ಇರಲಿ ಮೊದಲು ನಾವು ಧ್ವನಿ ಎತ್ತುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಆದ್ರೆ ಅವರು ಮಾತನಾಡಿದ ರೀತಿ ಮತ್ತು ಬೆದರಿಸುವಂತಿದ್ದ ಆ ಧ್ವನಿ ಜನರಿಗೆ ಇಷ್ಟವಾಗಲಿಲ್ಲ ಅಂತ ನನಗೆ ಅನಿಸುತ್ತದೆ. ಆದ್ರೆ ಅವರು ಹಾಗೇ ಮಾತಾಡ್ಬೇಕು ಅಂತ ಮಾತಾಡಿಲ್ಲ. ಈಗ ಅವರು ತಮ್ಮ ಹೇಳಿಕೆಯನ್ನ ಸ್ಪಷ್ಟಪಡಿಸುವುದು ಉತ್ತಮ ಎಂದು ನನಗೆ ಅನಿಸುತ್ತೆ ಎಂದು ರಮ್ಯಾ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಸರ್ ಹೇಳಿದ ರೀತಿಯನ್ನ ನಾನು ಒಪ್ಪೋದಿಲ್ಲ, ಆದ್ರೆ ನಟರು ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಅನ್ನೋ ಅವರ ಅಭಿಪ್ರಾಯವಾಗಿತ್ತು ಅನ್ನೋದನ್ನು ನಾನು ಒಪ್ಪುತ್ತೇನೆ ಎಂದು ನಟಿ ರಮ್ಯಾ ಹೇಳಿದ್ರು. ಈ ಮೂಲಕ ಮೊನ್ನೆ ಡಿಕೆಶಿ ಹೇಳಿಕೆ ಪರವಾಗಿ ನಿಂತಿದ್ದ ರಮ್ಯಾ ಒಂದೇ ದಿನದಲ್ಲಿ ಉಲ್ಟ ಹೊಡೆದಿದ್ದಾರೆ.

 

 

 


Spread the love

LEAVE A REPLY

Please enter your comment!
Please enter your name here