ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾ ರಾವ್ ಮಲತಂದೆ ಡಿಜಿಪಿ ರಾಮಚಂದ್ರರಾವ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಟ ಮತ್ತು ಪ್ರೊಟೋಕಾಲ್ ಸಂಬಂಧ ಡಿಜಿಪಿ ರಾಮಚಂದ್ರರಾವ್ ಒಂದೂವರೆ ಗಂಟೆ ವಿಚಾರಣೆ ಎದುರಿಸಿದ್ದು ಹಲವು ಪ್ರಶ್ನೆಗಳಿಗೆ ರಾಮಚಂದ್ರರಾವ್ ಒಂದೇ ರೀತಿಯ ಉತ್ತರಗಳನ್ನ ನೀಡಿದ್ದಾರೆ.
ಗೋಲ್ಡ್ ಸಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾ ರಾವ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಕ್ತಿ ಭವನದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರರಾವ್ ಅವರನ್ನು ತೀವ್ರ ವಿಚಾರಣೆ ನಡೆಸ್ತಿರುವ ಅಧಿಕಾರಿಗಳು, ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಹಾಗೂ ಡಿಐಜಿ ವಂಶಿಕೃಷ್ಣ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.
ರಾನ್ಯಾ ರಾವ್ ಗೆ ನೀಡಲಾಗಿದ್ದ ಪ್ರೊಟೊಕಾಲ್ ಸಂಬಂಧ ರಾಮಚಂದ್ರರಾವ್ ವಿರುದ್ಧ ಆರೋಪ ಕೇಳಿ ಬಂದಿತ್ತು. ರಾಮಚಂದ್ರರಾವ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರ ತನಿಖೆಗೂ ಸೂಚನೆ ನೀಡಿದೆ. ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಸಿ ವರದಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಮಚಂದ್ರರಾವ್ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ರನ್ಯಾ ರಾವ್ಗೆ ಪ್ರೊಟೋಕಾಲ್ ನೀಡಲು ನೀವು ತಿಳಿಸಿದ್ರಾ? ಮಗಳಿಗಾಗಿ ನೀವೇನಾದ್ರು ವಾಹನವನ್ನ ಕಳುಹಿಸಿ ಕೊಟ್ಟಿದ್ರಾ? ಯಾರಿಗಾದ್ರು ಕರೆ ಮಾಡಿ ಪ್ರೊಟೋಕಾಲ್ ನೀಡಲು ಹೇಳಿದ್ರಾ? ನೀವೇನಾದ್ರೂ ರನ್ಯಾ ಕರೆತರಲು ಹೋಗಿದ್ರಾ? ಎಂಬ ಪ್ರಶ್ನೆಗಳಿಗೆ ರಾಮಚಂದ್ರ ರಾವ್ರಿಂದ ‘ನೋ’ ಎಂಬ ಉತ್ತರವೇ ಬಂದಿದೆ. ಇನ್ನು, ಪ್ರೊಟೊಕಾಲ್ ಮತ್ತು ಸಿಸಿಟಿವಿ ದೃಶ್ಯ ಸೇರಿದಂತೆ ಕರೆ ಮಾಡಿರುವ ದಾಖಲೆಯನ್ನ ಗೌರವ್ ಗುಪ್ತಾ ಟೀಂ ಕಲೆ ಹಾಕಿದೆ. ಒಟ್ಟು ಒಂದೂವರೆ ಗಂಟೆ ವಿಚಾರಣೆ ಎದುರಿಸಿ ಹೊರ ಬಂದ ರಾಮಚಂದ್ರ ರಾವ್, ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ.