ಕುಂಭಮೇಳದಲ್ಲಿ ಕತ್ರಿನಾ ವಿಡಿಯೋ ಶೂಟ್ ಮಾಡಿದವರಿಗೆ ಛೀಮಾರಿ ಹಾಕಿದ ನಟಿ ರವೀನಾ ಟಂಡನ್

0
Spread the love

ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್‌ ನಟಿ ಕತ್ರಿನಾ ಕೈಫ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದರು. ಈ ವೇಳೆ ಕತ್ರಿನಾ ಜೊತೆ ಅತ್ತೆ ವಿಕ್ಕಿ ಕೌಶಲ್‌ ತಾಯಿ ಕೂಡ ಜೊತೆಗಿದ್ದರು. ಇದೀಗ ಮಹಾಕುಂಭದಲ್ಲಿ ಕತ್ರಿನಾ ಅವರು ಸ್ನಾನ ಮಾಡಿದ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಒಂದು ವೀಡಿಯೊದಲ್ಲಿ, ಕೆಲವು ಪುರುಷರು ಕತ್ರಿನಾ ಅವರ ಅನುಮತಿಯಿಲ್ಲದೆ ಅವರ ಆಕ್ಷೇಪಾರ್ಹ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು ಈ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಂತರ ನಟಿ ರವೀನಾ ಟಂಡನ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು ಅತ್ಯಂತ ಅಸಹ್ಯಕರ ಎಂದಿದ್ದಾರೆ.

Advertisement

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಇಬ್ಬರು ಪುರುಷರು ತಮ್ಮ ವೀಡಿಯೊವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾರೆ. ಬಳಿಕ ಕ್ಯಾಮೆರಾವನ್ನು ಕತ್ರಿನಾ ಕಡೆಗೆ ತಿರುಗಿಸುತ್ತಾರೆ. ‘ಇದು ನಾನು, ಇದು ನನ್ನ ಸಹೋದರ, ಮತ್ತು ಇವರು ಕತ್ರಿನಾ ಕೈಫ್’ ಎಂದು ಹೇಳುತ್ತಾರೆ. ಇದನ್ನು ಕೇಳಿ ಅವರ ಸುತ್ತಲಿನ ಜನರು ನಗಲು ಪ್ರಾರಂಭಿಸಿದರು. ಕೆಲವರಿಗೆ ಈ ವಿಡಿಯೋ ತಮಾಷೆಯಾಗಿದೆ ಎನಿಸಿದರೆ, ಹಲವರು ಟೀಕಿಸಿದ್ದಾರೆ. ಮಹಾಕುಂಭದಂತಹ ಪವಿತ್ರ ಸ್ಥಳದಲ್ಲಿ ಇಂತಹ ನಡವಳಿಕೆಯನ್ನು ನೋಡಿ, ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

ಈ ವಿಡಿಯೋಗೆ ನಟಿ ರವೀನಾ ಟಂಡನ್ ಕೂಡ ಪ್ರತಿಕ್ರಿಯಿಸಿದ್ದು, ‘ಇದು ಅತ್ಯಂತ ಅಸಹ್ಯಕರ’. ‘ಈ ರೀತಿಯ ಜನರು ಶಾಂತಿಯುತ ಮತ್ತು ಅರ್ಥಪೂರ್ಣ ಕ್ಷಣವನ್ನು ಹಾಳುಮಾಡುತ್ತಾರೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಇದನ್ನು ಟೀಕಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here