ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್ ಶೆಫಾಲಿ ಜರಿವಾಲಾ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 42ವರ್ಷ ವಯಸ್ಸಾಗಿತ್ತು. ಅಂದ ಹಾಗೆ ಶೆಫಾಲಿ ಮಾಜಿ ಬಾಯ್ ಫ್ರೆಂಡ್ ಕೂಡ ಕೇವಲ 40 ವರ್ಷಕ್ಕೆ ಹೃದಯಾಘಾತದಿಂದಲೇ ಮೃತಪಟ್ಟಿದ್ದರು.
ಬಾಲಿವುಡ್ ಖ್ಯಾತ ನಟಿ ಹಾಗೂ ಮಾಡೆಲ್ ಶೆಫಾಲಿ ಜರಿವಾಲಾ 2019ರಲ್ಲಿ ಹಿಂದಿಯ ಬಿಗ್ಬಾಸ್ ಸೀಸನ್ 13ರಲ್ಲಿ ವೈರ್ಲ್ಡ್ಕಾರ್ಡ್ ಎಂಟ್ರಿ ಪಡೆದಿದ್ದರು. ಈ ಸೀಸನ್ನಲ್ಲಿ ತನ್ನ ಬಹುದಿನದ ಗೆಳೆಯ ಸಿದ್ಧಾರ್ಥ್ ಶುಕ್ಲಾರನ್ನು ಭೇಟಿ ಮಾಡಿದ್ದರು. 15 ವರ್ಷಗಳ ಹಿಂದೆ ಇಬ್ಬರು ಡೇಟಿಂಗ್ ಮಾಡಿದ್ದರು.
ಸಿದ್ಧಾರ್ಥ್ ಶುಕ್ಲಾ ತನ್ನ 40ನೇ ವಯಸ್ಸಿನಲ್ಲಿ 2021ರ ಸೆಪ್ಟೆಂಬರ್ 02 ರಂದು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಈ ವೇಳೆ ಶೆಫಾಲಿ ತೀವ್ರ ದುಃಖ ವ್ಯಕ್ತಪಡಿಸಿದ್ದರು. ನಂತರ ಸಿದ್ಧಾರ್ಥ್ ಶುಕ್ಲಾ ಅವರ ಪುಣ್ಯತಿಥಿ 2024 ಸೆಪ್ಟೆಂಬರ್ 2 ರಂದು ಶೆಫಾಲಿ ತನ್ನ ಎಕ್ಸ್ ಅಕೌಂಟ್ನಲ್ಲಿ ಕೊನೆಯದಾಗಿ ಫೋಟೋವೊಂದನ್ನ ಶೇರ್ ಮಾಡಿ ಇಂದು ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ ಅಷ್ಟೇ ದೋಸ್ತ್ @sidharth_shukla ಎಂದು ಬರೆದು ಹಾರ್ಟ್ ಎಮೋಜಿಯನ್ನ ಟ್ಯಾಗ್ ಮಾಡಿದ್ದರು. ಇದೇ ಅವರ ಕೊನೆ ಟ್ವಿಟರ್ ಪೋಸ್ಟ್ ಆಗಿತ್ತು. 2024ರ ಸೆಪ್ಟೆಂಬರ್ 2 ರಿಂದ ಈವರೆಗೂ ಯಾವುದೇ ಪೋಸ್ಟ್ ಕೂಡ ಅವರು ಶೇರ್ ಮಾಡಿರಲಿಲ್ಲ.