ಬೆಂಗಳೂರು: ನಟಿ ಶುಭಾ ಪೂಂಜಾ ಅವರ ತಾಯಿ ವಿಧಿವಶರಾಗಿದ್ದಾರೆ. ಅಗಲಿದ ಅಮ್ಮನಿಗೆ ನಟಿ ಭಾವುಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ, ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕೋಕೆ ಬರೋದು ಇಲ್ಲ.
Advertisement
24 ಗಂಟೆ ನಿನ್ನ ಜೊತೆನೇ ಇರುತ್ತಿದ್ದೆ, ಈಗ ನಾನು ಏನು ಮಾಡಲಿ. ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ, ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ, ನನ್ನ ಯಾಕೆ ಬಿಟ್ಟು ಹೋದೆ ಎಂದು ನಟಿ ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ.
ನಟಿಯ ಪೋಸ್ಟ್‌ಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ‘ಜಾಕ್‌ಪಾಟ್’ ಸಿನಿಮಾದ ಮೂಲಕ ಶುಭಾ ಪೂಂಜಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊಗ್ಗಿನ ಮನಸ್ಸು, ಕಂಠೀರವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶುಭಾ ನಟಿಸಿದ್ದಾರೆ.