‘ನಟಿ ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಕೊಲೆ: ನಟ ಮೋಹನ್‌ ಬಾಬು ವಿರುದ್ಧ ದೂರು ದಾಖಲು

0
Spread the love

ಖ್ಯಾತ ನಟಿ ಸೌಂದರ್ಯಾ ನಿಧನರಾಗಿ ಹಲವು ವರ್ಷಗಳೆ ಕಳೆದಿದೆ. ಇದೀಗ ನಟಿಯ ಸಾವು ಮತ್ತೆ ಮುನ್ನಲೆಗೆ ಬಂದಿದೆ. 2004ರ ಏಪ್ರಿಲ್ 17ರಂದು ಸೌಂದರ್ಯ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಹೊತ್ತಿ ಉರಿದಿದ್ದು ಈ ವೇಳೆ ಸೌಂದರ್ಯ ಜೊತೆಗೆ ಅವರ ಸಹೋದರ ಅಮರನಾಥ್ ಕೂಡ ನಿಧನರಾಗಿದ್ದರು. ಘಟನೆ ನಡೆದು 21 ವರ್ಷಗಳು ಕಳೆದಿದ್ದು, ಇದೀಗ ಟಾಲಿವುಡ್​ನ ಖ್ಯಾತ ನಟ, ನಿರ್ಮಾಪಕ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸೌಂದರ್ಯ ಸಾವಿನ ಹಿಂದೆ ಮೋಹನ್‌ ಬಾಬು ಕೈವಾಡ ಇದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

Advertisement

ಮಗನೊಂದಿಗಿನ ಮನಸ್ತಾಪದಿಂದ ಮೋಹನ್‌ ಬಾಬು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಅವರು ಸೌಂದರ್ಯಾ ಸಾವಿನ ಪ್ರಕರಣದಲ್ಲಿ ಸಮಸ್ಯೆ ಎದುರಿಸಿದ್ದಾರೆ. ಸೌಂದರ್ಯಾ ಸಾವಿನ ಹಿಂದೆ ಮೋಹನ್ ಬಾಬು ಕೈವಾಡ ಇದೆ ಎಂದು ಚಿಟ್ಟಿಮಲ್ಲು ಎಂಬುವವರು ಆಂಧ್ರ ಪ್ರದೇಶದ ಖಮ್ಮಾಮ್ ಜಿಲ್ಲೆಯಲ್ಲಿ ದೂರು ದಾಖಲಿಸಿದ್ದಾರೆ.

‘ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಜಾಗದ ವಿಚಾರದಲ್ಲಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್​ನಲ್ಲಿರುವ ಆರು ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ನಿರಾಕರಿಸಿದ್ದರು. ಇದರಿಂದ ಈ ಕೊಲೆ ನಡೆದಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೌಂದರ್ಯಾ ಅವರ ಸಾವಿನ ಬಳಿಕ ಈ ಜಾಗ ಮಾರುವಂತೆ ಅವರ ಕುಟುಂಬದವರಿಗೆ ಮೋಹನ್ ಬಾಬು ಒತ್ತಡ ಹೇರಿದ್ದಾರೆ ಎಂದು ದೂರನಲ್ಲಿ ತಿಳಿಸಲಾಗಿದೆ. ಆ ಬಳಿಕ ಮೋಹನ್ ಬಾಬು ಅವರು ಅಕ್ರಮವಾಗಿ ಈ ಜಾಗವನ್ನು ಪಡೆದುಕೊಂಡರು ಎನ್ನಲಾಗಿದೆ. ಸದ್ಯ ದೂರು ನೀಡಿದ ಚಿಟ್ಟಿಮಲ್ಲು ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಕೋರಿದ್ದಾರೆ. ಅಲ್ಲದೆ ಈ ಜಾಗವನ್ನು ಸರ್ಕಾರದವರು ವಶಕ್ಕೆ ಪಡೆದು ಅಗತ್ಯ ಇರುವ ವೃದ್ಧಾಶ್ರಮದವರಿಗೆ ನೀಡುವಂತೆ ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here