ಕನ್ನಡದ ನಟಿ ಶ್ರೀಲೀಲಾ ಸದ್ಯ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳ ಮೂಲಕವು ಗುರುತಿಸಿಕೊಳ್ತಿದ್ದಾರೆ. ಈ ಮೊದಲು ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದ ನಟಿ ಶ್ರೀಲೀಲಾ ಇದೀಗ ಮೂರನೇ ಮಗುವನ್ನು ದತ್ತು ಪಡೆದಿದ್ದರು. ಈ ಬಗ್ಗೆ ಸ್ವತಃ ಶ್ರೀಲೀಲಾ ಮಾಹಿತಿ ಹಂಚಿಕೊಂಡಿದ್ದಾರೆ.
21ನೇ ವಯಸ್ಸಿಗೆ ಶ್ರೀಲೀಲಾ ಎರಡು ಮಕ್ಕಳ ತಾಯಿಯಾದರು. ಹೌದು, ಈ ಮೊದಲು ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿದ್ದ ಶ್ರೀಲೀಲಾ ಎರಡು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಮತ್ತೊಂದು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.
‘ಮನೆಗೆ ಮತ್ತೊಂದು ಸದಸ್ಯೆಯ ಆಗಮನ’ ಎಂದು ಶ್ರೀಲೀಲಾ ಬರೆದುಕೊಂಡಿದ್ದಾರೆ. ಜೊತೆಗೆ ಮಗುವಿನ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ ಹಾಕಿಕೊಂಡಿದ್ದಾರೆ. ನಟಿಯ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಲೀಲಾಗೆ ಈಗಿನ್ನೂ 23 ವರ್ಷ. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಸಾಮಾಜಿಕ ಕೆಲಸದ ಬಗ್ಗೆ ಇಷ್ಟೊಂದು ಗಮನ ಹರಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.