ಜನಾರ್ಧನ್ ರೆಡ್ಡಿ ಪುತ್ರ ಕಿರೀಟ ನಟನೆಯ ಜ್ಯೂನಿಯರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹೀಗಾಗಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಜ್ಯೂನಿಯರ್ ಸಿನಿಮಾ ಬಿಡುಗಡೆ ಆಗುತ್ತಿದ್ದು ಚಿತ್ರದಲ್ಲಿ ಕಿರೀಟಿಗೆ ಜೋಡಿಯಾಗಿ ನಟಿ ಶ್ರೀಲೀಲಾ ನಟಿಸಿದ್ದಾರೆ. ಅಂದ ಹಾಗೆ ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾ ದುಭಾರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಕಿರೀಟ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
‘ಜ್ಯೂನಿಯರ್’ ಚಿತ್ರಕ್ಕಾಗಿ ಶ್ರೀಲೀಲಾ 2.50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಿರೀಟಿಯನ್ನು ಸಖತ್ ಗ್ರ್ಯಾಂಡ್ ಆಗಿ ಚಿತ್ರರಂಗಕ್ಕೆ ಪರಿಚಯಿಸಬೇಲು ಎನ್ನುವ ಕಾರಣಕ್ಕೆ ಬಹಳ ದೊಡ್ಡದಾಗಿ ಸಿನಿಮಾ ನಿರ್ಮಿಸಲಾಗ್ತಿದೆ. ಯಾವುದೇ ವಿಚಾರದಲ್ಲಿ ರಾಜಿಯಾಗದೇ ಪರಭಾಷೆಯ ಸ್ಟಾರ್ ನಟ, ನಟಿಯರನ್ನೇ ಈ ಸಿನಿಮಾಗಾಗಿ ಕರೆತರಲಾಗಿದೆ.
ವಾರಾಹಿ ಚಲನಚಿತ್ರಂ ಬ್ಯಾನರ್ ಅಡಿಯಲ್ಲಿ ರಜನಿ ಕೊರಪಾಟಿ ಹಾಗೂ ಸಾಯಿ ಕೊರಪಾಟಿ ಬಂಡವಾಳ ಹೂಡಿದ್ದು, ರಾಧಾಕೃಷ್ಣ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇದೇ ಶುಕ್ರವಾರ ಸಿನಿಮಾ ರಿಲೀಸ್ ಆಗಲಿದೆ.