ಫಾಲೋವರ್ ಕಡಿಮೆಯಾಗಿದ್ದಕ್ಕೆ ಇನ್ಫ್ಲುಯೆನ್ಸರ್ ಸಾವು: ಮೊದಲೇ ಊಹಿಸಿದ್ದೆ ಎಂದ ನಟಿ ತಾಪ್ಸಿ ಪನ್ನು

0
Spread the love

ಸೋಷಿಯಲ್‌ ಮೀಡಿಯಾ ಮೂಲಕ ಹಲವರು ಖ್ಯಾತಿ ಘಳಿಸಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ಕಟೆಂಟ್ ಗಳನ್ನು ನೀಡುತ್ತಾ ಸಾಕಷ್ಟು ಫಾಲೋವರ್ಸ್‌ ಗಳನ್ನು ಹೊಂದಿರುವ ಸೋಷಿಯಲ್‌ ಮೀಡಿಯಾ ಸ್ಟಾರ್‌ ಗಳು ಅದರಿಂದಲೇ ಜೀವ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಅಂತೆಯೇ ಜನಪ್ರಿಯ ಇನ್​ಪ್ಲುಯೆನ್ಸರ್ ಆಗಿದ್ದ ಮಿಶಾ ಅಗರ್ವಾಲ್, ಫಾಲೋವರ್ಸ್ ಕಡಿಮೆ ಆದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ನಟಿ ತಾಪ್ಸಿ ಪನ್ನು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮಿಶಾ ಅಗರ್ವಾಲ್, ಒಳ್ಳೆಯ ಇನ್​ಸ್ಟಾಗ್ರಾಂ ಇನ್​ಫ್ಲುಯೆನ್ಸರ್ ಆಗಿದ್ದರು. ಆರಂಭದಲ್ಲಿ ವ್ಯಕ್ತಿಯ ದಿನ ನಿತ್ಯದ ಸಮಸ್ಯೆಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಹೇಳಿ ಬಹಳ ಜನಪ್ರಿಯತೆ ಗಳಿಸಿದ್ದ ಮಿಶಾ ಅಗರ್ವಾಲ್, ಫಾಲೋವರ್ ಹೆಚ್ಚಿಸಿಕೊಳ್ಳಲು ವ್ಲಾಗ್, ಕೊಲ್ಯಾಬ್, ಫ್ಯಾಷನ್ ಕಂಟೆಂಟ್​ಗಳನ್ನು ಸಹ ಹಾಕಲು ಪ್ರಾರಂಭಿಸಿದ್ದರು. ಆರಂಭದಲ್ಲಿ ತುಸು ಸದ್ದು ಮಾಡಿದ ಮಿಶಾ ಅಗರ್ವಾಲ್​ ಆ ನಂತರ ಬೇಡಿಕೆ ಕಳೆದುಕೊಂಡರು. ಅವರ ಫಾಲೋವರ್​ಗಳ ಸಂಖ್ಯೆಯೂ ಕಡಿಮೆ ಆಗತೊಡಗಿತು. ಇದರಿಂದ ಬೇಸರಗೊಂಡ ಮಿಶಾ ಅಗರ್ವಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಿಶಾರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರ ಸಹೋದರಿ, ‘ನನ್ನ ಸಹೋದರಿ ಇನ್​ಸ್ಟಾಗ್ರಾಂನ ಸುತ್ತ ಒಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಳು. ಆಕೆಯ ಫಾಲೋವರ್ಸ್​ ಆಕೆಯ ಪ್ರಪಂಚ ಆಗಿದ್ದರು. ಆಕೆಗೆ ಇದ್ದ ಏಕೈಕ ಗುರಿ 1 ಮಿಲಿಯನ್ ಫಾಲೋವರ್​ಗಳನ್ನು ಪಡೆಯುವುದಾಗಿತ್ತು. ಆಕೆಯ ಫಾಲೋವರ್​ಗಳ ಸಂಖ್ಯೆ ಕಡಿಮೆ ಆಗಲು ಶುರುವಾದಾಗ ಆಕೆ ತಳಮಳಗೊಂಡಳು. ಆಕೆಗೆ ತಾನು ಮುಖ್ಯಳಲ್ಲ, ತಾನು ಮೌಲ್ಯ ಇಲ್ಲದವಳು ಅನಿಸಲು ಶುರುವಾಯ್ತು. ಹಲವು ಬಾರಿ ಈ ವಿಷಯಕ್ಕೆ ನನ್ನನ್ನು ತಬ್ಬಿ ಅತ್ತಿದ್ದಿದೆ. ನಾನು ಸಮಾಧಾನ ಮಾಡಿದ್ದೆ’ ಎಂದಿದ್ದಾರೆ.

ಆಕೆ ಎಲ್​ಎಲ್​ಬಿ ಪದವೀಧರೆ, ಪಿಸಿಎಸ್​ಜೆ ಪರೀಕ್ಷೆಯ ತಯಾರಿ ನಡೆಸುತ್ತಿದ್ದಳು. ಅದನ್ನು ಆಕೆಗೆ ನೆನಪು ಮಾಡಿಸಿದೆ. ಚೆನ್ನಾಗಿ ಓದಿ ಒಂದು ದಿನ ಜಡ್ಜ್ ಆಗು ಎಂದೆ ಆದರೆ ಅದನ್ನೆಲ್ಲ ಆಕೆ ನಿರ್ಲಕ್ಷ್ಯ ಮಾಡಿದಳು. ಇನ್​ಸ್ಟಾಗ್ರಾಂ ಆಕೆಯ ಪ್ರಪಂಚ ಆಗಿಬಿಟ್ಟಿತ್ತು. ಫಾಲೋವರ್ಸ್ ಕಡಿಮೆ ಆದಂತೆ ಆಕೆ ಖಿನ್ನತೆಗೆ ಜಾರಿದಳು’ ಎಂದು ಮಿಶಾ ಅಗರ್ವಾಲ್ ಅವರ ಸಹೋದರಿ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ನಿರ್ಮಾಪಕ ತಾಪ್ಸಿ ಪನ್ನು, ‘ಇಂಥಹದ್ದೊಂದು ಘಟನೆ ನಡೆಯುತ್ತದೆಯೆಂದು ನಾನು ಮೊದಲೇ ಊಹಿಸಿ ಭಯಪಟ್ಟಿದ್ದೆ. ನನ್ನ ಭಯ ನಿಜವಾಗಿದೆ. ಒಂದು ದಿನ ಬರುತ್ತದೆ ಅಂದು ಸಂಖ್ಯೆಗಳು, ನಿಜವಾದ ಪ್ರೀತಿ ಮತ್ತು ಗೆಳೆತನವನ್ನು ಹಿಂದೆ ಸರಿಸಿ ಬಿಡುತ್ತವೆ ಎಂಬುದು ನನ್ನ ಭಯವಾಗಿತ್ತು ಅದೀಗ ನಿಜವಾಗಿದೆ’ ಎಂದಿದ್ದಾರೆ ತಾಪ್ಸಿ ಪನ್ನು.


Spread the love

LEAVE A REPLY

Please enter your comment!
Please enter your name here