ನಟಿ ತಾರಾ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ನಕಲಿ ಪೋಸ್ಟ್..! ದೂರು ದಾಖಲು

0
Spread the love

ಕನ್ನಡ ಸಿನಿಮಾ ರಂಗದ ಹಿರಿಯ ನಟಿ ತಾರಾ ಅವರ ಫೇಸ್‍ಬುಕ್ ಹ್ಯಾಕ್ ಮಾಡಿ ಅನಾವಶ್ಯಕ ವಿಚಾರಗಳ ಕುರಿತಾಗಿ ಪೋಸ್ಟ್ ಮಾಡಲಾಗಿದೆ. ಫೇಸ್‍ಬುಕ್ ಐಡಿ ಮೂಲಕ ಸ್ನೇಹಿತರಿಗೆ ಟ್ಯಾಗ್ ಮಾಡಿ ಅನಾವಶ್ಯಕ ಸಂದೇಶ ಕಳಿಸಿದ ಆರೋಪದ ಮೇಲೆ ತಾರಾ ಅವರು ದಕ್ಷಿಣ ವಿಭಾಗ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಹಿರಿಯ ನಟಿ, ಕಾನೂನು ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Advertisement

ನಟಿ ತಾರಾನುರಾಧ ಹಾಗೂ ತಾರಾನುರಾಧ ವೇಣು ಎಂಬ ಎರಡು ಅಕೌಂಟ್‍ಗಳನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆ ಅವರು ಹೆಚ್ಚಾಗಿ ತಾರಾನುರಾಧ ವೇಣು ಎಂಬ ಅಕೌಂಟ್ ಬಳಸುತ್ತಿದ್ದರು. ವೇಳೆ ಸ್ನೇಹಿತರೊಬ್ಬರು ತಾರಾಗೆ ಲಿಂಕ್ ಒಂದನ್ನ ಕಳುಹಿಸಿದ್ದಾರೆ. ಆಗ ವಿಚಾರ ಬಯಲಾಗಿದೆ.

ತಾರಾನುರಾಧ ಎಂಬುವ ಅಕೌಂಟ್‍ನಲ್ಲಿ ವಿಚಾರವೊಂದನ್ನ ಪೋಸ್ಟ್ ಮಾಡಲಾಗಿತ್ತು. ಆದರೆ ಅದು ನಾನು ಮಾಡಿದ ಪೋಸ್ಟ್ ಅಲ್ಲ. ನನ್ನ ಅಕೌಂಟ್ ಓಪನ್ ಮಾಡಿದಾಗ ಪೋಸ್ಟ್ ಕಾಣುತ್ತಿಲ್ಲ. ಆದರೆ ಲಿಂಕ್ ಓಪನ್ ಮಾಡಿದರೆ ಪೋಸ್ಟ್ ಕಾಣಿಸುತ್ತಿದೆ. ಹೀಗಾಗಿ ಪೋಸ್ಟ್ ಡಿಲೀಟ್ ಮಾಡುವಂತೆ ದೂರು ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here