ಚೌಡಯ್ಯನವರ ಆದರ್ಶಗಳನ್ನು ಅಳವಡಿಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ರಂಗನವಾಡ ಓಣಿಯ ಅಂಬಿಗ ಯುವ ಸೇನಾ ಸಂಘಟನೆ ವತಿಯಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭ ಜರುಗಿತು.

Advertisement

ಸಮಾರಂಭವನ್ನು ಜೆ.ಬಿ. ಗಾರವಾಡ, ಡಾ. ಗಣೇಶ ಸುಲ್ತಾನಪುರ, ಯಶೋಧಾ ಜಾಲಗಾರ ಉದ್ಘಾಟಿಸಿದರು. ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟಿನ ಅಧ್ಯಕ್ಷ ಜೆ.ಬಿ. ಗಾರವಾಡ ಮಾತನಾಡಿ, ನಮ್ಮ ಜಿಲ್ಲಾಮಟ್ಟದ ಸಂಘಟನೆಯಲ್ಲಿ ಯುವಕರು, ಮಹಿಳೆಯರು ಹೆಚ್ಚು ಹೆಚ್ಚು ಸದಸ್ಯತ್ವ ಪಡೆಯಲು ಮುಂದಾಗಬೇಕು ಎಂದರು.

ಬೆಟಗೇರಿಯ ಅಂಬಿಗರ ಮಹಿಳಾ ಸಂಘದ ಅಧ್ಯಕ್ಷೆ ಯಶೋಧಾ ಜಾಲಗಾರ ಮಾತನಾಡಿದರು. ವೇದಿಕೆಯ ಮೇಲೆ ಕರಿಯಪ್ಪ ಗುಡಿಸಾಗರ, ಕಲ್ಲಪ್ಪ ಬಾರಕೇರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿನೋದ ಜಕನೂರ, ಸುನೀಲ ಮಾನ್ವಿ, ಕೃಷ್ಣ ಬಾರಕೇರ, ನೀಲಕಂಠ ಗುಡಿಸಾಗರ, ರಾಜು ಬಾರಕೇರ, ಹನಮಂತ ಮಾನ್ವಿ, ಪರಶುರಾಮ ಬಾರಕೇರ, ಯಲ್ಲಪ್ಪ ಬಾರಕೇರ, ರಾಘವೇಂದ್ರ ಜಕನೂರ, ನಾಗರಾಜ ಬಾರಕೇರ, ನೀಲಕಂಠ ಗುಡಿಸಾಗರ, ಚೇತನ ಮಾನ್ವಿ, ಸಾಗರ ಮಾನ್ವಿ, ಕಾರ್ತಿಕ ಮಾನ್ವಿ, ರೋಹಿತ್ ಜಕನೂರ, ಪ್ರಜ್ವಲ್ ಬಾರಕೇರ, ಮಂಜು ಮಲ್ಲಾಪೂರ, ರಾಮು ಬಾರಕೇರ, ಶಂಕರ ಬಾರಕೇರ, ಧನುಷ ಬಾರಕೇರ, ತೇಜಸ್ ಬಾರಕೇರ, ನಾಗರಾಜ ಮಡ್ಡಿ, ಪ್ರದೀಪ ದೇವಗಿರಿ, ಬಸವರಾಜ ಜಿಗಳೂರ, ರವಿ ಜಾಲವಾದಿ, ಸಂಜು ಮಲ್ಲಾಪೂರ, ಉಡಚಮ್ಮ ಮಾನ್ವಿ, ಬಸವಣೆವ್ವ ಬಾರಕೇರ, ಯಲ್ಲಮ್ಮ ಮಡ್ಡಿ, ಪಾರವ್ವ ಜನಕೂರ, ರೇಣುಕಾ ಮಾನ್ವಿ, ಮಂಜುಳಾ ಮಾನ್ವಿ, ಶಾಂತಾ ಮಾನ್ವಿ, ಕಮಲವ್ವ ಮಲ್ಲಾಪೂರ, ಸುಜಾತಾ ಬಾರಕೇರ, ರೇಖಾ ಬಾರಕೇರ, ಶಾಂತಮ್ಮ ಮಾನ್ವಿ, ಪುಷ್ಪಾ ಬಾರಕೇರ, ಸುನಿತಾ ಮನಗೂಳಿ, ಪುಷ್ಪಾ ಜಕನೂರ, ಶೀಲಾ ಜಕನೂರ, ಸರಸ್ವತಿ ಜಕನೂರ, ಕೀರ್ತಿ ಜಕನೂರ, ಕವಿತಾ ಬಾರಕೇರ, ದೀಪಾ ಮಡ್ಡಿ, ಸಹನಾ ಮಾನ್ವಿ, ಪರಶುರಾಮ ಜಕನೂರ, ಪರಶುರಾಮ ಮಾನ್ವಿ, ವೆಂಕಟೇಶ ಬಾರಕೇರ, ನಿಂಗರಾಜ ಬಾರಕೇರ, ಸಂಜು ಮಲ್ಲಾಪೂರ ಮುಂತಾದವರಿದ್ದರು.

ಪ್ರೀತಮ್ ಬಾರಕೇರ, ಪ್ರಜ್ವಲ್ ಬಾರಕೇರ ವಚನ ಗೀತೆಗಳನ್ನು ಹೇಳಿದರು. ಕಮಲಾಬಾಯಿ ಮಲ್ಲಾಪೂರ ಪ್ರಾರ್ಥಿಸಿದರು. ವಿನೋದ ಜಕನೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜಿಲ್ಲಾ ಮುಖಂಡ ಡಾ. ಗಣೇಶ ಸುಲ್ತಾನಪುರ ಮಾತನಾಡಿ, ಸಂಘಟನೆಯ ಮೂಲಕ ಹಿಂದುಳಿದ ಗಂಗಾಮತ ಸಮಾಜದ ಬಡ ಕುಟುಂಬಗಳಿಗೆ, ಸ್ವ-ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here