ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶರಣರ ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಜಾಗತಿಕ ಲಿಂಗಾಯತ ಮಾಹಾಸಭಾ ಮಹಿಳಾ ಘಟಕದ ಕಾರ್ಯದರ್ಶಿ ದ್ರಾಕ್ಷಾಯಣಿ ಕೋಳಿವಾಡ ಹೇಳಿದರು.

Advertisement

ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ 166ನೇ ಜಾತ್ರಾ ಮಹೋತ್ಸವ ಅನುಭಾವ ಗೋಷ್ಠಿ-3ರಲ್ಲಿ ಉಪನ್ಯಾಸ ನೀಡಿ, ಬಸವಾದಿ ಶಿವ ಶರಣರು 12ನೇ ಶತಮಾನದ ಸಂತರು, ಮಾಹಾಚಿತರು, ಶರಣರು ನಿತ್ಯ ಜೀವನದಲ್ಲಿ ನಾವು ಯಾವ ರೀತಿ ಬದುಕಿ ಬಾಳಬೇಕು ಎಂಬುದನ್ನು ತಮ್ಮ ವಚನಗಳ ಮೂಲಕ ಸಾದರ ಪಡಿಸಿ ನಮಗೆ ಉಣಬಡಿಸಿದವರು. ಇಂತಹ ಶರಣರ ವಚನಗಳನ್ನು ಕೇವಲ ಪಠಿಸಿದರೆ ಸಾಲದು, ಅವುಗಳ ಸಾರವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಸುಂದರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಸಾನ್ನಿಧ್ಯವನ್ನು ಗವಿಮಠದ ಡಾ. ಮಲ್ಲಿಕಾರ್ಜುನ ಮಾಹಾಸ್ವಾಮಿಗಳು, ಸಮ್ಮುಖವನ್ನು ಸವಣುರ ದೊಡ್ಡಹುಣಸೆಕಲ್ಮಠದ ಚನ್ನಬಸವ ಮಾಹಾಸ್ವಾಮಿಗಳು ವಹಿಸಿದ್ದರು. ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಾಹಾಸ್ವಾಮಿಗಳು, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಡಾ. ವೀರೇಶ ಹಂಚಿನಾಳ, ಆನಂದ ಗಡ್ಡದೇವರಮಠ, ಡಾ. ಎಸ್.ಸಿ. ಚವಡಿ, ಇಮಾಮಸಾಬ ಶೇಖ, ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎಲ್. ಕರಿಗೌಡ್ರ ಇದ್ದರು


Spread the love

LEAVE A REPLY

Please enter your comment!
Please enter your name here