ವಿಜಯಸಾಕ್ಷಿ ಸುದ್ದಿ, ಗದಗ: ದಲಿತ ಯುವ ಸೇನಾ ಸಮಿತಿ ವತಿಯಿಂದ 69ನೇ ಡಾ. ಬಾಬಾಸಾಹೇಬ ಅಂಬೇಡ್ಕರರ ಮಹಾಪರಿನಿರ್ವಾಣದ ಚೈತ್ಯಭೂಮಿ (ಮುಂಬೈ-ದಾದರ್) ಚಲೋ ಕಾರ್ಯಕ್ರಮದಲ್ಲಿ ಕಳೆದ 30 ವರ್ಷಗಳಿಂದ ಸತತವಾಗಿ ಪಾಲ್ಗೊಂಡು ಈ ವರ್ಷವೂ ಸಹ ಭಾಗವಹಿಸುತ್ತಿರುವ ಸಮಿತಿಯ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು, ಯುವಕರು ಡಾ. ಬಿ.ಆರ್. ಅಂಬೇಡ್ಕರವರ ಪುತ್ಥಳಿಗೆ ಪುಷ್ಪಾರ್ಪಣೆಗೈದರು.
ಗದಗ ಜಿಲ್ಲಾಧಿಕಾರಿಗಳು ಮುಂಬೈ-ದಾದರ್ ಬಸ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರರ ಮಹಾಪರಿನಿರ್ವಾಣದಲ್ಲಿ ಭಾಗವಹಿಸುತ್ತಿರುವ ತಾವುಗಳು ಸುರಕ್ಷಿತವಾಗಿ, ವ್ಯವಸ್ಥಿತವಾಗಿ ತೆರಳಲು ಸರ್ಕಾರದಿಂದ ದಲಿತ ಯುವ ಸೇನಾ ಸಮಿತಿ ಅಧ್ಯಕ್ಷರಾದ ವಿಜಯ ಮುಳಗುಂದ ಹಾಗೂ ದಲಿತ ಮುಖಂಡರಾದ ಎಸ್.ಎನ್. ಬಳ್ಳಾರಿಯವರ ಆಶಯದಂತೆ ಪ್ರತಿ ವರ್ಷ 1 ಅಥವಾ 2 ಬಸ್ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಸಲ 10 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ತಾವುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಬಿ.ಆರ್. ಅಂಬೇಡ್ಕರರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಕಂಡ ಕನಸುಗಳನ್ನು ನನಸು ಮಾಡಬೇಕೆಂದರು.
ಈ ಸಂದರ್ಭದಲ್ಲಿ ದಲಿತ ಯುವ ಸೇನಾ ಸಮಿತಿ ಅಧ್ಯಕ್ಷರಾದ ವಿಜಯ ಮುಳಗುಂದ ಹಾಗೂ ದಲಿತ ಮುಖಂಡರಾದ ಎಸ್.ಎನ್. ಬಳ್ಳಾರಿ, ವೆಂಕಟೇಶ ಎಚ್. ಬಳ್ಳಾರಿ, ವಿನಾಯಕ ಬಳ್ಳಾರಿ, ಪರಶುರಾಮ ಬಂಕದಮನಿ, ತಿಮ್ಮಣ್ಣ ಡೋಣಿ, ಮೈಲಾರಪ್ಪ ಕೋಟಪ್ಪನವರ, ಮಹಾಂತೇಶ ಮದ್ನೂರ, ಮಾರುತಿ ಭಜಂತ್ರಿ, ಮಂಜುನಾಥ ಶಾಂತಗೇರಿ ಸೇರಿದಂತೆ ದಲಿತ ಯುವ ಸೇನಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.



