Bigg Boss Kannada: ಫಿನಾಲೆ ಟಿಕೆಟ್ ಎದುರು ಹರಕೆಯ ಕುರಿ ಆದ್ರಾ ಧನರಾಜ್..?

0
Spread the love

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇನ್ನು ಮೂರು ವಾರ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳು 100 ದಿನವನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದಾರೆ. ಈ ವಾರ ಪ್ರಮುಖರೇ ನಾಮಿನೇಟ್ ಆಗಿದ್ದು, ದೊಡ್ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.

Advertisement

ಇದರ ಬೆನ್ನಲ್ಲೇ ರ್ಧಿಗಳಲ್ಲೇ ಫಿನಾಲೆಗೆ ಆಯ್ಕೆ ನಡೆಯುತ್ತಿದ್ದು ಚೈತ್ರಾ ಬೆನ್ನಲ್ಲೇ ಇದೀಗ ಧನರಾಜ್ ಅವರಿಗೂ ಬಿಗ್ ಶಾಕ್ ಕೊಡಲಾಗಿದೆ. ಧನರಾಜ್ ಮೊದಲಿನಿಂದಲೂ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿ ಆಟ ಆಡಿಕೊಂಡು, ನಗಿಸುತ್ತ, ಕೊಟ್ಟ ಟಾಸ್ಕ್​ಗಳನ್ನು ಆಡಿ ಯಶಸ್ವಿಯಾಗಿದ್ದರು.

ಇದೀಗ ರಿಲೀಸ್ ಆಗಿರುವ ಪ್ರೋಮೋ ವಿಡಿಯೋದಲ್ಲಿ ಎಲ್ಲರೂ ಧನರಾಜ್ ಹೆಸರನ್ನು ಹೇಳಿದ್ದು ಫೈನಲ್​ಗೆ ಅನರ್ಹರು ಎಂದು ಸಹ ಆಟಗಾರರು ಹೇಳಿದ್ದಾರೆ. ಅಲ್ಲದೇ ಗೆಳೆಯ ಹನಮಂತು ಕೂಡ ‘ಎಷ್ಟು ಹೇಳಿದರು ಕೂಡ ನಿನಗೆ ಬುದ್ಧಿ ಬರಲಿಲ್ಲ’ ಎಂದು ಹಾಡು ಹಾಡಿ ಏನನ್ನೋ ಇನ್​​ಡೈರೆಕ್ಟ್ ಆಗಿ ಹೇಳಿದಂತೆ ಇದೆ.

ಫಿನಾಲೆ ಟಿಕೆಟ್​ನಲ್ಲಿ ಧನರಾಜ್ ಹರಕೆಯ ಕುರಿ ಆದ್ರಾ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅಣ್ಣ, ತಂಗಿ ಎಂದು ಗುರುತಿಸಿಕೊಂಡ ಮಂಜು ಹಾಗೂ ಗೌತಮಿ ಇಬ್ಬರು ಫಿನಾಲೆ ಟಿಕೆಟ್​ನಿಂದ ಧನರಾಜ್​ ಅವರ ಹೆಸರನ್ನು ಸೂಚಿಸಿ ಹೊರಗಿಟ್ಟಿದ್ದಾರೆ. ಇದಕ್ಕೆ ಮಾರಿ ಹಬ್ಬ ಜಾತ್ರೆಯಲ್ಲಿ ಕುರಿನ ಬಲಿ ಕೊಟ್ಟಂತೆ ಎಂದು ಧನರಾಜ್​ಗೆ ಭವ್ಯ ಹೇಳಿ ನಕ್ಕಿದ್ದಾರೆ.

ಇನ್ನು ಧನರಾಜ್ ಹೆಸರನ್ನು ಫಿನಾಲೆಯಿಂದ ಹೊರಗಿಡುವುದಕ್ಕೆ ಕಾರಣ ಕೊಟ್ಟ ಗೌತಮಿ, ಮಂಜು ಮೊದಲ ಎರಡು- ಮೂರು ವಾರ ಧನರಾಜ್ ಹಿಂಜರಿಯುತ್ತಿದ್ದರು, ಸರಿಯಾಗಿ ಆಡಿಲ್ಲ ಎಂದಿದ್ದಾರೆ. ಈ ಮೂಲಕ ಫಿನಾಲೆ ಟಿಕೆಟ್ ಪಡೆಯುವ ಅವಕಾಶ ಅವರ ಕೈ ತಪ್ಪಿದೆ. ಈ ವಾರ ಅವರು ನಾಮಿನೇಟ್ ಕೂಡ ಆಗಿದ್ದು, ಅದರಿಂದಲೂ ಬಚಾವ್ ಆಗಬೇಕಾದ ಅನಿವಾರ್ಯತೆ ಇದೆ.


Spread the love

LEAVE A REPLY

Please enter your comment!
Please enter your name here