ಸೆ. 15ರಂದು ‘ಅಭಿಯಂತರರ ದಿನಾಚರಣೆ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಂಜಿನಿಯರಿಂಗ್ ಕ್ಷೇತ್ರದ ಪಿತಾಮಹ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣಾರ್ಥವಾಗಿ, ನಗರದ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಕೇಂದ್ರದಲ್ಲಿ ಸೆ. 15ರಂದು ಸಂಜೆ 6ಕ್ಕೆ ಅಭಿಯಂತರರ ದಿನಾಚರಣೆ ಹಾಗೂ ಹೊಸ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಮಳ್ಳಣ್ಣವರ ತಿಳಿಸಿದರು.

Advertisement

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸೆ. 15ರಂದು ನಾಡಿನಾದ್ಯಂತ ‘ಅಭಿಯಂತರರ ದಿನಾಚರಣೆ’ ಯನ್ನು ಆಚರಿಸಲಾಗುತ್ತದೆ. ಈ ಮೂಲಕ ಅಭಿಯಂತರರು ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಣೆ ನೀಡಲಾಗುತ್ತಿದೆ. ಅವರ ಸಾರ್ಥಕ ಬದುಕು ನಮಗೆಲ್ಲಾ ಸ್ಫೂರ್ತಿಯಾಗಿದೆ ಎಂದರು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಉದ್ಘಾಟಿಸಲಿದ್ದು, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಧಾರವಾಡ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ದಿಲೀಪ ಕುಲಕರ್ಣಿ, ಮಹೇಶ್ ಪಟೇಲ್, ನಾಗರಾಜ ಲಂಗೋಟಿ, ಜಗನ್ನಾಥ ಚಾಗಿ, ಸಿದ್ದಲಿಂಗಪ್ಪ ಲಕ್ಕುಂಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಬಸವರಾಜ ಮಳ್ಳಣ್ಣವರ, ಕಾರ್ಯದರ್ಶಿ ಐ.ಎಂ. ಕೊಪ್ಪಳ, ಖಜಾಂಚಿ ಬಸವರಾಜ ಶಲವಡಿ, ಎಂ.ಪಿ. ಪಾಟೀಲ, ಎಸ್.ಎಸ್. ಚವಡಿ, ಬಸಪ್ಪ ಚಿವಟಗುಂಡಿ, ರಾಜು ಗುಡಸಾಲಿ, ಮಂಜುನಾಥ ಟಿಕಾರೆ, ಲೋಹಿತ ಶಾವಿ, ವಿರೂಪಾಕ್ಷ ನವಲಗುಂದ, ನರೇಂದ್ರ ಚಿಕ್ಕನಗೌಡ್ರ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಐಲಿ, ಬಿ.ಆರ್. ಹೊಸಮನಿ, ಎಸ್.ಡಿ. ಪಾಟೀಲ, ಎಂ.ಪಿ. ಪಾಟೀಲ, ವಿ.ಎಚ್. ಡಂಬಳ, ಶಂಕರ ಬಾಕಳೆ, ಬಿ.ಬಿ. ಶಲವಡಿ, ಪ್ರಕಾಶ್, ರಾಜು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here