HomeBengaluru Newsಡಿಜಿಟಲ್ ಮಾಧ್ಯಮಗಳಿಗೂ ಜಾಹೀರಾತು ನೀತಿ

ಡಿಜಿಟಲ್ ಮಾಧ್ಯಮಗಳಿಗೂ ಜಾಹೀರಾತು ನೀತಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಪತ್ರಕರ್ತರು ಮತ್ತು ಪತ್ರಿಕೆಗೆ ಸಂಬಂಧಿಸಿದ ಯಾವುದೇ ವೃತ್ತಿಯ ಸಮಸ್ಯೆಗಳಿದ್ದರೂ ನಾನು ಸ್ಪಂದಿಸಲು ಸದಾ ಸಿದ್ಧ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಪುನರುಚ್ಛರಿಸಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ವಿಪ್ರ ಪತ್ರಕರ್ತರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಣ್ಣ ಪತ್ರಿಕೆಗಳ ಸಮಸ್ಯೆ ಕುರಿತು ನನಗೆ ಅರಿವಿದೆ. ನಾನೂ ಕೂಡ ಪೇಪರ್ ಹಾಕುವ ಕೆಲಸ ಮಾಡಿಕೊಂಡು ತಳಮಟ್ಟದಿಂದ ಈ ಸ್ಥಾನದವರೆಗೂ ಬಂದಿದ್ದೇನೆ. ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ನನಗಿದೆ. ಹೀಗಾಗಿ ಪತ್ರಿಕೆಗಳ ಮತ್ತು ಪತ್ರಕರ್ತರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನ್ಯಾಯವಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಪತ್ರಿಕೆಗಳ ಜಾಹೀರಾತು ದರ ಪರಿಷ್ಕರಣೆ ಕುರಿತು ಈಗಾಗಲೇ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಸಕಾರತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಡಿಜಿಟಲ್ ಮಾಧ್ಯಮಗಳಿಗೂ ಜಾಹೀರಾತು ನೀತಿಯ ಕರಡು ಸಿದ್ದಗೊಳ್ಳುತ್ತಿದೆ. ಶೀಘ್ರದಲ್ಲಿ ಅದು ಕೂಡ ಜಾರಿಗೆ ಬರುವ ವಿಶ್ವಾಸವಿದೆ ಎಂದರು.

ಬ್ರಾಹ್ಮಣ ಸಮಾಜದ ಪತ್ರಿಕೆಗಳಿಗೆ ಜಾಹೀರಾತು ಕೊಡುವಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಿದ್ದಕ್ಕಾಗಿ ಸಮುದಾಯದ ಪತ್ರಕರ್ತರು ಕೆ.ವಿ. ಪ್ರಭಾಕರ್ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಸಲಹೆಗಾರರ ವಿಶೇಷಾಧಿಕಾರಿ ಕೆ.ಪಿ. ಪುಟ್ಟಸ್ವಾಮಯ್ಯ ಅವರನ್ನೂ ವಿಪ್ರ ಸಂಘದಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕೋಲಾರವಾಣಿಯ ಮುರಳಿಪ್ರಸಾದ್, ಅನುಸೂಯ ಎನ್.ಮೂರ್ತಿ, ಕರಾವಳಿ ಅಲೆ ಪತ್ರಿಕೆಯ ರೋಹಿಣಿ ಸೀತಾರಾಮ್, ಸಂಜೆ ಸಮಯ ಪತ್ರಿಕೆಯ ಅನಿಲ್ ಕುಮಾರ್, ಹನುಮೇಶ್ ಯಾವಗಲ್ ಮುಂತಾದವರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!