ಧಾರವಾಡ: ಮಾದ್ಯಮಗಳಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಸರಕಾರದ ಆಡಳಿತ ಕುಸಿದು ಹೋಗಿದೆ. 50 ವರ್ಷದ ನಂತರ ಬರ ತಾಂಡವ ಆಡುತ್ತಿದೆ. ಮುಂಗಾರು-ಹಿಂಗಾರು ಬೆಳೆ ಕೈ ಕೊಟ್ಟಿದೆ.
ರಾಜ್ಯ ಸರಕಾರ ರಾಜ್ಯದ ಜನತೆಯ ಪರವಾಗಿ ನಿಲ್ಲಬೇಕಿತ್ತು, ಆದರೆ ಸರಕಾರ ನಿಲ್ಲುತ್ತಿಲ್ಲ, ಪ್ರತಿದಿನ 7 ಗಂಟೆ ತ್ರಿಪೇಸ್ ಕೊಡಬೇಕಿತ್ತು ಕೊಡ್ತಾ ಇಲ್ಲ, ಸರಕಾರ 7 ತಾಸು ರೈತರಿಗೆ ತ್ರಿಪೇಸ್ ಕೊಡಬೇಕು.
ವಿರಾವೇಶದಿಂದ ಹೇಳಿಕ್ಕೊಂಡ್ರು ರಾಜ್ಯದ ಅಭಿವೃದ್ದಿ ಮಾಡುತ್ತೆವೆ ಎಂದಿದ್ದ ಸಿದ್ದರಾಮಯ್ಯ, ಇದೀಗ ಸರ್ವರಿಗೂ ಸಮಪಾಲು ಅಂತಾರೆ. ಅವರು ಸುಳ್ಖು ಹೇಳಿಕ್ಕೊಂಡು ಗಿಮಿಕ್ ಮಾಡಿದ್ದಾರೆ ಎಂದರು.
ಇನ್ನೂ ಪ್ರತಿ ತಾಲೂಕು ಪಂಚಾಯತಗೆ 10 ಕೋಟಿ ಹಣ ಬಿಡುಗಡೆ ಮಾಡಬೇಕು. ನವಲಗುಂದ, ಅಣ್ಣಗೇರಿ, ಕಲಘಟಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೊರಟಿದ್ದಾರೆ. 68 ಕೆರೆಗಳನ್ನ ಮಲಪ್ರಭಾ ಡ‌್ಯಾಂ ನಿಂದ ನೀರು ತುಂಬಿಸಿಕೊಡಬೇಕು. ಮಾದೇವಪ್ಪ ನಿನಗೂ ಪ್ರಿ, ಕಾಕಾಸಾಹೇಬ್ ನಿನಗೂ ಪ್ರಿ ಎಂದಿದ್ದ ಸಿದ್ದರಾಮಯ್ಯ ಎಂದು ಸಿಎಂ ಹೇಳಿಕೆಯನ್ನ ಮಿಮಿಕ್ರಿ ಮಾಡಿದರು.