ಬಳ್ಳಾರಿ: ಜಿಲ್ಲಾ ವಿಭಜನೆಯ ಬಳಿಕ ಅವಿಭಜಿತ ಬಳ್ಳಾರಿ ಜಿಲ್ಲೆ ತನ್ನ ಹೃದಯವನ್ನೇ ಕಳೆದುಕೊಂಡಿದ್ದು ಇದೀಗ ವಿಜಯನಗರ ಜಿಲ್ಲೆಯ ಜನರು ಬಯಸಿದರೆ ಮತ್ತೆ ವಿಲೀನ ಮಾಡುವುದಾಗಿ ಸಚಿವ ಬಿ ನಾಗೇಂದ್ರ ತಿಳಿಸಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಆನಂದ್ ಸಿಂಗ್ ಅವರ ಮುತುವರ್ಜಿಯಲ್ಲಿ ವಿಜಯನಗರವನ್ನು ಬಳ್ಳಾರಿಯಿಂದ ಬೇರ್ಪಡಿಸಿ ನೂತನ ಜಿಲ್ಲೆಯನ್ನು ರಚಿಸಲಾಗಿತ್ತು. ಈ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸುದ್ದಿಗಾರರ ಪ್ರಶ್ನಗಳಿಗೆ ಉತ್ತರಿಸಿದ ಅವರು,
ಬಳ್ಳಾರಿ ಜಿಲ್ಲಾ ವಿಭಜನೆ ವಿಚಾರಕ್ಕೆ, ಕಾಲವೇ ಉತ್ತರ ನೀಡಲಿದೆ ಎಂದರು. ವಿಜಯನಗರ ಜಿಲ್ಲೆಯ ಜನರು ಮತ್ತೆ ಬಳ್ಳಾರಿಗೆ ಸೇರುತ್ತವೆ ಎಂದರೆ ನಾವು ಜಿಲ್ಲೆ ಒಂದು ಮಾಡುತ್ತೆವೆ. ಅಖಂಡ ಜಿಲ್ಲೆಗೆ ಹಂಪಿ ಮತ್ತು ತುಂಗಭದ್ರಾ ಜಲಾಶಯ ಒಂದು ಮುಕುಟದಂತೆ ಇತ್ತು. ಆದರೆ ಜಿಲ್ಲಾ ವಿಭಜನೆ ಮಾಡಿದ್ದು, ಅಖಂಡ ಜಿಲ್ಲೆ ತನ್ನ ಹೃದಯ ಕಳೆದುಕೊಂಡಿದೆ. ಮತ್ತೆ ಜಿಲ್ಲೆಯ ಜನರು ಬಯಸಿದರೇ ಜಿಲ್ಲೆ ಒಂದು ಮಾಡುತ್ತೆವೆ ಎಂದು ತಿಳಿಸಿದರು.