ಆದೇಶ ನಂತ್ರ ಪಥ ಸಂಚಲನಕ್ಕೆ ಅವಕಾಶ ಕೊಟ್ರೆ ಅಧಿಕಾರಿಗಳ ಮೇಲೆ ಕ್ರಮ: ಡಾ.ಜಿ.ಪರಮೇಶ್ವರ್

0
Spread the love

ಬೆಂಗಳೂರು: ಆದೇಶವಾದ ಮೇಲೆ  ಪಥ ಸಂಚಲನಕ್ಕೆ ಅವಕಾಶ ಕೊಟ್ರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರಲದಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ.

Advertisement

ಬಗ್ಗೆ ನಿನ್ನೆ ಸಂಜೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇದೇ ಕಾರಣಕ್ಕೆ ಕಲಬುರಗಿಯಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡಿಲ್ಲ. ಆದೇಶವಾದ ಮೇಲೆ ಅವಕಾಶ ಕೊಟ್ಟರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇನ್ನೂ ಆರ್ಎಸ್ಎಸ್ಹೊಸದೇನಲ್ಲ, ನೂರು ವರ್ಷವಾಗಿದೆ. ಆರ್ಎಸ್ಎಸ್ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಾಣಿಕೆಆಗುವುದಿಲ್ಲ. ಅದರ ಬಗ್ಗೆ ಆಗಿಂದಾಗ್ಗೆ ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

2013ರಲ್ಲಿ ಜಗದೀಶ್ ಶೆಟ್ಟರ್ ಅವರು ಆದೇಶ ಮಾಡಿದ್ದರು. ನಾವು ಆದೇಶ ಮಾಡಿದರೆ ಮಾತ್ರ ಪ್ರಶ್ನೆ ಮಾಡುತ್ತಾರೆ. ಅವರು ಮಾಡಿದರೆ ಗೊಂದಲ ಆಯ್ತು ಅಂತಾರೆ. ಪ್ರಚೋದನೆ ಆಗಬಾರದೆಂದು ಇದು ಮುಂಜಾಗ್ರತಾ ಕ್ರಮ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here