ಉಡುಪಿ: ನಿನ್ನೆ ಅಂಬಲಪಾಡಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪತಿ ರಮಾನಂದ ಶೆಟ್ಟಿ ಮೃತಪಟ್ಟಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮನೆಯೊಡತಿ ಅಶ್ವಿನಿ(50) ಕೂಡ ಸಾವನ್ನಪ್ಪಿದ್ದಾರೆ.
Advertisement
ಬೆಂಕಿಯಿಂದ ಉಸಿರಾಡಲು ಸಾಧ್ಯವಾಗದೆ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್ ಆಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸೆಂಟ್ರಲ್ ಎಸಿ ಶಾರ್ಟ್ ಸರ್ಕ್ಯೂಟ್ನಿಂದ ಬ್ಲಾಸ್ಟ್ ಆಗಿ ಅಗ್ನಿ ಅವಘಡ ಸಂಭವಿಸಿತ್ತು. ಇದೀಗ ಅಗ್ನಿ ಅವಘಡಕ್ಕೆ ದಂಪತಿ ದಾರುಣ ಸಾವನ್ನಪ್ಪಿದ್ದಾರೆ.