ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಪಿ.ಎಲ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ‘ಕೃಷಿಕ’ ನವೋದ್ಯಮ ಪೋಷಣಾ ಕೇಂದ್ರದ ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಉದ್ಘಾಟಿಸಿದರು.

Advertisement

ಈ ಕಾರ್ಯಕ್ರಮವು ಭಾರತ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ-ರಫ್ತಾರ ಘಟಕದಿಂದ ಪ್ರಾಯೋಜಿಸಲ್ಪಟ್ಟಿತ್ತು. ಒಂದು ವಾರದ ತರಬೇತಿಗಾಗಿ ೨೩ ನೂತನ ಕೃಷಿ ನವೋದ್ಯಮಗಳನ್ನು ಆಯ್ಕೆ ಮಾಡಲಾಗಿದೆ. ಸಂಭಾವ್ಯ ಕೃಷಿ ಉದ್ಯಮಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ವಿನೂತನ ಕೃಷಿ ನವೋದ್ಯಮ ಆರಂಭಿಸಲು ಪ್ರಾಯೋಗಿಕ, ತಾಂತ್ರಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಪ್ರಧಾನ ಸಂಶೋಧಕ ಹಾಗೂ ‘ಕೃಷಿಕ’ ನವೋದ್ಯಮ ಪೋಷಣಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಎಸ್. ಡೊಳ್ಳಿ ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಆರ್.ಬಸವರಾಜಪ್ಪ, ‘ಕೃಷಿಕ’ ನವೋದ್ಯಮ ಪೋಷಣಾ ಕೇಂದ್ರದ ಕೋ.ಪಿ.ಐ ಡಾ. ಬಸವರಾಜ ಗಾಳಿ ಹಾಗೂ ರಫ್ತಾರ್ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here