ಮುಂಗಾರು ಎದುರಿಸಲು ಕೃಷಿ ಇಲಾಖೆ ಸಿದ್ಧ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ನರೇಗಲ್ಲ ಹೋಬಳಿಯಲ್ಲಿ ಇದುವರೆಗೂ ಆವರಿಸಿದ್ದ ಬರದ ಛಾಯೆ ಮಾಯವಾಗುವಂತೆ ಮಾಡಿದೆ. ಮುಂಗಾರು ಪೂರ್ವದಲ್ಲೇ ಮುಂಗಾರಿನಂತೆ ಮೋಡಗಳು ಆರ್ಭಟಿಸುತ್ತಿದ್ದು, ಮಳೆ ಸುರಿಸುತ್ತಿರುವುದು ರೈತರಲ್ಲಿ ಹರ್ಷ ಮೂಡಿಸುವದರೊಂದಿಗೆ ನಿರೀಕ್ಷೆಗಳನ್ನು ಹುಟ್ಟಿಸುತ್ತಿದೆ. ರೈತರ ಜೀವನಾಡಿ ಎತ್ತುಗಳಿಗೆ ಭೂಮಿ ಸಾಗುವಳಿ ಮಾಡಲು ಸಾಕಷ್ಟು ಬೇಡಿಕೆ ಬರುತ್ತಿದೆ.

Advertisement

ಕಳೆದ ವರ್ಷ ಜೂನ್ ತಿಂಗಳನಲ್ಲೂ ಈ ಪರಿಯಲ್ಲಿ ಮಳೆಯಾಗಿರಲಿಲ್ಲ. ವರ್ಷವಿಡೀ ಮಳೆಯ ಕೊರತೆಯನ್ನು ಕಂಡು, ಈ ವರ್ಷವೂ ಬಿರುಬೇಸಿಗೆಯನ್ನು ಅನಿಭವಿಸಿ ಕಳಾಹೀನವಾಗಿದ್ದ ವಸುಂಧರೆ ಬೀಳುತ್ತಿರುವ ಮಳೆಗೆ ಅಕ್ಷರಶಃ ತಣಿಯುತ್ತಿದೆ. ಈಗಾಗಲೇ ರೈತರು ಭೂಮಿಯನ್ನು ಹಸನು ಮಾಡಿಕೊಳ್ಳುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಮುಂಗಾರು ಪೂರ್ವದ ಮಳೆಗೆ ಬಿತ್ತನೆ ಮಾಡಲು ಹೋಬಳಿಯ ಕೆಲವೊಂದು ಗ್ರಾಮದ ರೈತರು ಸಿದ್ಧತೆ ನಡೆಸಿದ್ದಾರೆ. ಇನ್ನುಳಿದ ಗ್ರಾಮಗಳಲ್ಲಿ ಮುಂಗಾರುನಲ್ಲಿ ಬಿತ್ತನೆ ಮಾಡಲು ಬೀಜ, ರಸ ಗೊಬ್ಬರವನ್ನು ದಾಸ್ತಾನಕ್ಕೆ ಮುಂದಾಗುತ್ತಿದ್ದಾರೆ. ಕೃಷಿ ಇಲಾಖೆ ಕೂಡ ಸಜ್ಜಾಗಿದೆ.

ಮೊದಲಿನಿಂದಲೂ ಭೂಮಿಯ ಫಲವತ್ತೆಗಾಗಿ ರೈತರು ಸಗಣಿ ಗೊಬ್ಬರ ಅವಲಂಬಿಸಿದ್ದರು. ಆದರೆ, ರಾಸಾಯನಿಕ ಗೊಬ್ಬರಗಳ ಬಳಕೆ ಆರಂಭವಾಗುತ್ತಿದ್ದAತೆ ಸೆಗಣಿ ಗೊಬ್ಬರ ಬಳಕೆಯಲ್ಲೂ ಇಳಿಮುಖ ಕಂಡುಬAದಿತು. ಇತ್ತೀಚಿಗೆ ಸಾವಯುವ ಕೃಷಿ ಪದ್ಧತಿ ಪ್ರಚಾರಕ್ಕೆ ಬರುತ್ತಿದ್ದಂತೆ ಮತ್ತೆ ರೈತರು ಸಾಂಪ್ರದಾಯಿಕ ಸೆಗಣಿ ಗೊಬ್ಬರದ ಬಳಕೆಯತ್ತ ಮನಸ್ಸು ಮಾಡಿ ಹೆಚ್ಚು ಹಣವನ್ನು ಕೊಟ್ಟು ತಿಪ್ಪೆ ಗೊಬ್ಬರವನ್ನು ಈಗಾಗಲೇ ತಮ್ಮ ಜಮೀನುಗಳಲ್ಲಿ ಹರಿವೆ ನೆಗಿಲವನ್ನು ಹೊಡೆಯುವ ಮೂಲಕ ಬಿತ್ತನೆಗೆ ಭೂಮಿಯನ್ನು ಸಜ್ಜುಗೊಳ್ಳಿಸಿದ್ದಾರೆ.

ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷಿ ಜಮೀನುಗಳಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ತಯಾರಿ ಜೋರಾಗಿದ್ದು, ರೈತರಿಗೆ ಬೇಕಾದ ಅಗತ್ಯ ಬೀಜ, ರಸಗೊಬ್ಬರವನ್ನು ಕೃಷಿ ಇಲಾಖೆಯಿಂದ ಸಮರ್ಥವಾಗಿ ಒದಗಿಸಲು ಈಗಾಗಗಲೇ ರೈತ ಸಂಕಪರ್ಕ ಕೇಂದ್ರಗಳಲ್ಲಿ ಬೀಜ ಮತ್ತು ಗೊರಬ್ಬರ ದಾಸ್ತಾನು ಆಗಿದೆ.

– ರವೀಂದ್ರಗೌಡ ಪಾಟೀಲ.

ರೋಣ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ.


Spread the love

LEAVE A REPLY

Please enter your comment!
Please enter your name here