ವಿಜಯಸಾಕ್ಷಿ ಸುದ್ದಿ, ಮುಳಗುಂದ : ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಂಡು ಗುರಿ ತಲುಪಲು ಅಧ್ಯಯನಶೀಲರಾಗಬೇಕು ಎಂದು ಸೊರಟೂರ ಆದಿಶಕ್ತಿ ಟ್ರಸ್ಟ್ ಅಧ್ಯಕ್ಷ ಶಿವಾನಂದ ಮಾದಣ್ಣವರ ಹೇಳಿದರು.
ಅವರು ಸೊರಟೂರ ಗ್ರಾಮದ ಆದಿಶಕ್ತಿ ಟ್ರಸ್ಟ್ ನ ನವಶಕ್ತಿ ಬೇಸಿಗೆ ಶಿಬಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಸಂಪತ್ತಿನ ಜತೆಗೆ ಜೀವನದಲ್ಲಿ ಉತ್ತಮ ಗುರಿ ಹೊಂದಬೇಕು. ದೇಶಪ್ರೇಮ, ಸದ್ಭಾವನೆ ಬೆಳೆಸಿಕೊಳ್ಳುವುದರಿಂದ ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗುತ್ತದೆ ಎಂದರು.
ಸೊರಟೂರ ಸರಕಾರಿ ಪದವಿಪೂರ್ವ ಕಾಲೇಜಿನ ಸುಧಾ ಮಾಯಪ್ಪನವರ 545 ಅಂಕ ಪಡೆದು ಪ್ರಥಮ, ಶೈನಜಾ ಅತ್ತಿಕಟ್ಟಿ 533 ಅಂಕ ಪಡೆದು ದ್ವಿತೀಯ, ವಿಜಯಲಕ್ಷ್ಮಿ ಗುಡಿ 521 ಅಂಕ ಪಡೆದು ತೃತೀಯ ಸ್ಥಾನ ಪಡೆದ ನಿಮಿತ್ತ ಸನ್ಮಾನಿಸಿ ಗೌರವಿಸಲಾಯಿತು.
ಬಿ.ಕೆ. ರೇಣುಕಾ, ಶಿವಾನಂದ ಮಾಯಪ್ಪನವರ, ಗೌರಮ್ಮಾ ಪೂಜಾರ, ಶೈಲಜಾ ಶೆಟ್ಟರ್, ಗ್ರಾ.ಪಂ ಸದಸ್ಯ ಹುಸೇನಬಿ ಚೋಳನ್ನವರ, ದೇವಕ್ಕ ಮಾದಣ್ಣನವರ, ರಮೇಶ ಓಂಕಾರಿ, ಡಾ. ರಾಠೋಡ್, ಬಾಬುಸಾಬ ಗದಗಿನ, ಹನಮಂತಪ್ಪ ಗುಡಿ, ಮಾಬುಸಾಬ ಬಾಬುಖಾನವರ, ಬಸವರಾಜ ಹಡಪದ ಇದ್ದರು.