ಕಲಬುರಗಿ:- ಕೈ ಕಾಲು ಕಟ್ಟಿ ಹಾಕಿ ಹೆಂಡತಿಯಿಂದಲೆ ಗಂಡನ ಬರ್ಬರ ಹತ್ಯೆ ನಡೆದ ಘಟನೆ ಕಲಬುರಗಿಯ ಆರದ ಜಿ ನಗರದ ಮನೆಯಲ್ಲಿ ಜರುಗಿದೆ. ಕನಕನಗರದ ನಿವಾಸಿ 26 ವರ್ಷದ ಈಶ್ವರ್ ಕೊಲೆಯಾದ ವ್ಯಕ್ತಿ.
Advertisement
ಕೃತ್ಯಕ್ಕೆ ಆಕೆಯ ಮನೆಯವರು ಕೂಡ ಸಾಥ್ ಕೊಟ್ಟಿದ್ದಾರೆ. ಮಗುವನ್ನ ನೋಡಲು ಪತ್ನಿ ಮನೆಗೆ ಈಶ್ವರ್ ಹೋಗಿದ್ದ ವೇಳೆ ಕೃತ್ಯ ಸಂಭವಿಸಿದೆ. ಕಲಬುರಗಿ ನಗರದಲ್ಲೆ ಆಟೋ ಚಾಲಕನಾಗಿ ಈಶ್ವರ್ ಕೆಲಸ ಮಾಡ್ತಿದ್ದ.
ಕಳೆದ ನಾಲ್ಕೈದು ವರ್ಷದ ಹಿಂದೆ ರಂಜಿತಾ ಜೊತೆ ಮದುವೆಯಾಗಿದ್ದ. ಗಂಡ ಹೆಂಡತಿಯ ಮದ್ಯೆ ಜಗಳವಾದ ಹಿನ್ನೆಲೆ, ಕಳೆದ ನಾಲ್ಕೈದು ತಿಂಗಳಿಂದ ತಾಯಿ ಮನೆಯಲ್ಲಿ ರಂಜಿತಾ ವಾಸವಾಗಿದ್ದರು.
ನಿನ್ನೆ ರಾತ್ರಿ ಮಗುವನ್ನು ನೋಡಲು ಬಂದು ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ಮಾಡಲಾಗಿದೆ.
ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.