ಗುಜರಾತ್: ಗುಜರಾತ್ನ ಅಹಮದಾಬಾದ್ನಲ್ಲಿ ಕಳೆದ ವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಹಾಗೂ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳು ಸೇರಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಇದೀಗಮೃತಪಟ್ಟವರ ಪೈಕಿ ಈವರೆಗೆ ಒಟ್ಟು 215 ಮಂದಿ ಗುರುತು ಪತ್ತೆಯಾಗಿದ್ದು, 198 ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಒಟ್ಟು 215 ಡಿಎನ್ಎ ವರದಿಗಳು ಮ್ಯಾಚ್ ಆಗಿವೆ. ಈ ಪೈಕಿ 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್, 32 ಬ್ರಿಟಿಷ್ ಮತ್ತಿ ಕೆನಡಿಯನ್ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
15 ಮೃತದೇಹಗಳನ್ನು ಏರ್ ಅಂಬುಲೆನ್ಸ್ ಹಾಗೂ 183 ಮೃತದೇಹಗಳನ್ನು ರೋಡ್ ಅಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಇದೆಲ್ಲವೂ ಸೇರಿ ಒಟ್ಟಾರೆ 222 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 8 ಮಂದಿ ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.