HomeIndia Newsಏರ್ ಇಂಡಿಯಾ ಪ್ರಯಾಣದರ ಮತ್ತಷ್ಟು ದುಬಾರಿ! ನಾಳೆಯಿಂದಲೇ ಜಾರಿ

ಏರ್ ಇಂಡಿಯಾ ಪ್ರಯಾಣದರ ಮತ್ತಷ್ಟು ದುಬಾರಿ! ನಾಳೆಯಿಂದಲೇ ಜಾರಿ

For Dai;y Updates Join Our whatsapp Group

Spread the love

ದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ, ಟಾಟಾ ಸಮೂಹದ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಇಂಧನ ಸರ್ಚಾರ್ಜ್ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ.

ಏರ್ ಟರ್ಬೈನ್ ಫ್ಯೂಲ್ ಬೆಲೆಗಳಲ್ಲಿ ತೀವ್ರ ಏರಿಕೆ ಹಿನ್ನೆಲೆ, ದೇಶೀಯ ವಿಮಾನಗಳಿಗೆ 299 ರೂ.ದಿಂದ 899 ರೂ.ವರೆಗೆ, ಅಂತಾರಾಷ್ಟ್ರೀಯ ವಿಮಾನಗಳಿಗೆ 24 ಡಾಲರ್ (2,232 ರೂ.) ರಿಂದ 280 ಡಾಲರ್ (26,041 ರೂ.) ವರೆಗೆ ಹೊಸ ಸರ್ಚಾರ್ಜ್ ವಿಧಿಸಲಾಗುವುದು. ಹೊಸ ಸರಕು ನಾಳೆಯಿಂದ (ಏ.8) ಅನ್ವಯವಾಗಲಿದೆ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೂ ಇದರಲ್ಲಿ ಸೇರಿದೆ.

ದೇಶೀಯ ಮಾರ್ಗಗಳಲ್ಲಿ ಫ್ಲ್ಯಾಟ್ ವ್ಯವಸ್ಥೆ ಬದಲಿಗೆ ದೂರ ಆಧಾರಿತ ಗ್ರಿಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ, ಅಂದರೆ ದೂರದ ಅಂತರವನ್ನು ಗಮನಿಸಿ ಸರ್ಚಾರ್ಜ್ ವಿಧಿಸಲಾಗುವುದು. ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಯಾವುದೇ ರಿಯಾಯಿತಿ ಇಲ್ಲದೆ ಹೆಚ್ಚಳವಾಗಿದೆ. ಬಾಂಗ್ಲಾದೇಶ, ಜಪಾನ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ ಮುಂತಾದ ಕೆಲವು ದೇಶಗಳಿಗೆ ಸರ್ಚಾರ್ಜ್ ಬದಲಾವಣೆಯ ಕುರಿತು ನಿರ್ಧಾರ ಬಾಕಿಯಿದೆ. ಅಗತ್ಯ ನಿಯಂತ್ರಕ ಅನುಮತಿಗಳು ದೊರೆತ ನಂತರವೇ ಈ ಮಾರ್ಗಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!