ಏರ್‌ ಇಂಡಿಯಾ ಪೈಲಟ್‌ ಆತ್ಮಹತ್ಯೆ ಪ್ರಕರಣ: ಆರೋಪಿತ ಪ್ರಿಯಕರನಿಗೆ ಸಿಕ್ತು ಮಂಜೂರು!

0
Spread the love

ಮುಂಬೈ:- ಏರ್‌ ಇಂಡಿಯಾ ಪೈಲಟ್‌ ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆಕೆಯ ಪ್ರಿಯಕರನಿಗೆ ಮುಂಬೈ ಕೋರ್ಟ್‌ ಇಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

Advertisement

ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸುವಂತೆ ಪ್ರಿಯಕರ ಒತ್ತಡ ಹೇರಿದ ಪರಿಣಾಮ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ ಅಂಧೇರಿಯ ಮರೋಲ್ ಪ್ರದೇಶದಲ್ಲಿರುವ ‘ಕನಕಿಯಾ ರೈನ್ ಫಾರೆಸ್ಟ್’ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಕಳೆದ ನವೆಂಬರ್‌ 25ರಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಳು. ಘಟನೆ ಬೆಳಕಿಗೆ ಬಂದ ಮರುದಿನವೇ ಆಕೆಯ ಗೆಳೆಯನನ್ನ ಪೊಲೀಸರು ಬಂಧಿಸಿದ್ದರು. ಬಿಎನ್‌ಎಸ್‌ ಸೆಕ್ಷನ್‌ 108 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆಗಾಗಿ ಇಂದು ಆರೋಪಿಯನ್ನ ಮುಂಬೈನ ಸೆಷನ್‌ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here