ಬೆಂಗಳೂರು: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಜೈಲು ಪಾಲಿಗೆ ಇದೀಗ ಹೊರಗಡೆ ಬಂದಿದ್ದಾಳೆ.. ಮತ್ತೊಂದು ಪ್ರಕರಣ ನಗರದಲ್ಲಿ ದಾಖಲಾಗಿದೆ. ಅಲ್ಲದೇ ಐಶ್ವರ್ಯ ಗೌಡಗೆ ಮತ್ತೆ ವಿಚಾರಣೆ ಹಾಜರಾಗುವಂತೆ ಖಾಕಿ ನೋಟಿಸ್ ನೀಡಿದೆ.
Advertisement
ಜೊತೆಗೆ ಆರೋಪಿ ಐಶ್ವರ್ಯ ಗೌಡ ಅವರ ಕೋಟ್ಯಂತರ ಬೆಲೆಬಾಳುವ 3 ಐಷಾರಾಮಿ ಕಾರು ಸೀಜ್ ಮಾಡಲಾಗಿದೆ.
ಹೌದು ನಿನ್ನೆ ಆರ್‌ಆರ್ ನಗರ ಪೊಲೀಸರು ದಾಳಿ ನಡೆಸಿ, ಐಶ್ವರ್ಯ ಗೌಡ ಪತಿ ಹರೀಶ್ ಹೆಸರಲ್ಲಿರುವ ಕೋಟ್ಯಂತರ ಬೆಲೆಬಾಳುವ 3 ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ. ಆಡಿ, ಬಿಎಂಡ್ಬ್ಲೂ, ಹಾಗೂ ಫಾರ್ಚೂನರ್,ಕಾರುಗಳು, 100ಗ್ರಾಂ ಚಿನ್ನ, 28 ಕೆ.ಜಿ ಬೆಳ್ಳಿ ಸೇರಿ ಕೆಲ ದಾಖಲೆಗಳು ಸೀಜ್ ಆಗಿವೆ.