ಕೃಷ್ಣನಾಗಿ ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ್ದ ನಟ ಅಜಯ್ ರಾವ್ ಇದೀಗ ವಕೀಲರಾಗಿ ತೆರೆ ಮೇಲೆ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಅಜಯ್ ರಾವ್ ನಟನೆಯ ಯುದ್ಧಕಾಂಡ ಚಿತ್ರ ಇದೇ ತಿಂಗಳು 18ರಂದು ರಿಲೀಸ್ ಆಗುತ್ತಿದೆ. ಚಿತ್ರದ ನಿರ್ಮಾಪಕರಾಗಿರೋ ಅಜಯ್ ರಾವ್ ಈ ಸಿನಿಮಾಗಾಗಿ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ದುಡ್ಡು ಕಡಿಮೆ ಆದಾಗ ತಮ್ಮ ಪ್ರೀತಿಯ BMW ಕಾರ್ ಅನ್ನೂ ಮಾರಿ ಬಿಟ್ಟಿದ್ದಾರೆ. ಆದರೆ ಅಜಯ್ ರಾವ್ ಪುಟ್ಟ ಮಗಳು ಚರಿಷ್ಮಾ ಕಾರು ಮಾರಬೇಡ ಎಂದು ಕಣ್ಣೀರು ಹಾಕಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುದ್ಧಕಾಂಡ ಸಿನಿಮಾದಲ್ಲಿ ನಾಯಕನಾಗಿರೋ ಅಜಯ್ ರಾವ್ ನಿರ್ಮಾಪಕರು ಆಗಿದ್ದಾರೆ. ಈ ಸಿನಿಮಾಗಾಗಿ ಅಜಯ್ ರಾವ್ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ತಮ್ಮ ಪ್ರೀತಿಯ BMW ಕಾರನ್ನು ಮಾರಿದಾರೆ. ಆದರೆ ಕಾರನ್ನು ಬೇರೆಯವರಿಗೆ ಕೊಡುವುದು ಇಷ್ಟವಾಗದೆ ಕಾರು ಕೊಡೋದು ಬೇಡ ಅಂತಲೇ ಹಠ ಹಿಡಿದಿದ್ದಾಳೆ. ಕಾರ್ ಬಳಿಯೇ ಸುಳಿದಾಡಿ ಕಣ್ಣೀರು ಇಟ್ಟಿದ್ದಾಳೆ.
ಮಗಳು ಕಣ್ಣೀರು ಹಾಕುತ್ತಿದ್ರೆ ಅತ್ತ ಅಜಯ್ ರಾವ್ ಮಗಳಿಗೆ ಸಾರಿ ಕೇಳಿದ್ದಾರೆ. ನಿನ್ನ ಫೇವರಿಟ್ ಕಾರ್ ಅಲ್ವಾ ಇದು. ಇದು ಹೋಗ್ಲಿ ಬಿಡು. ಬೇರೆ ಕಾರ್ ತೆಗೆದುಕೊಳ್ಳೋಣ ಅಂತಲೇ ಹೇಳ್ತಾರೆ. ಆದರೂ ಚರಿಷ್ಮಾ ಕೇಳದೆ ಕಾರಿನ ಬಳಿಯೇ ಸುಳಿದಾಡಿ ಕಣ್ಣೀರು ಹಾಕಿದ್ದಾಳೆ.