ಅಕ್ಕಮಹಾದೇವಿ ವ್ಯಕ್ತಿತ್ವ ಮಹಿಳೆಯರಿಗೆ ಆದರ್ಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಶತಮಾನದಲ್ಲಿನ ಕನ್ನಡದ ಪ್ರಥಮ ಮಹಿಳಾ ಕವಯಿತ್ರಿ, ವಚನಗಾರ್ತಿ, ವೈರಾಗ್ಯನಿಧಿ ಅಕ್ಕಮಹಾದೇವಿಯಲ್ಲಿದ್ದ ತ್ಯಾಗ, ಆತ್ಮಸ್ಥೈರ್ಯ, ಅಚಲ ನಿರ್ಧಾರ, ಭಕ್ತಿ, ವಿಶ್ವಾಸ ಇನ್ನಿತರೆ ಗುಣಗಳನ್ನು 21ನೇ ಶತಮಾನದಲ್ಲಿರುವ ಮಹಿಳೆಯರು ತಮ್ಮ ನಿತ್ಯ ಬದುಕಿನಲ್ಲಿ ರೂಢಿಸಿಕೊಂಡರೆ ಅವರು ಅನೇಕ ಸಮಸ್ಯೆ, ಸಂಕಷ್ಟಗಳಿಂದ ದೂರಿರಲು ಸಾಧ್ಯವಾಗುವುದು ಎಂದು ಕವಯಿತ್ರಿ ಮಂಜುಳಾ ವೆಂಕಟೇಶಯ್ಯಾ ಅಭಿಪ್ರಾಯಪಟ್ಟರು.

Advertisement

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಚಿಂತನ ಕೂಟ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಗದಗ ಇವರ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ವಿ. ಜಗತಾಪ ಮಾತನಾಡಿ, ಇಂದು ಮಹಿಳೆಯರು ಹೆಚ್ಚು ಸಶಕ್ತರಾಗಿರುವುದು ಅಗತ್ಯವಾಗಿದೆ. ಸಶಕ್ತರಾಗಿರಲು ಸೂರ್ಯನಮಸ್ಕಾರ, ಯೋಗ, ವ್ಯಾಯಾಮ ಮಾಡುವುದರೊಂದಿಗೆ ವಚನಗಳ ತತ್ವಾಚರಣೆಗಳನ್ನು ಪರಿಪಾಲಿಸಿದರೆ ಮಹಿಳೆ ದೈಹಿಕ/ಮಾನಸಿಕ/ನೈತಿಕ/ಸಾಮಾಜಿಕವಾಗಿ ಆರೋಗ್ಯವಂತಳಾಗಿರಲು ಸಾಧ್ಯ ಎಂದರು.

ಕಾರ್ಯಕ್ರಮ ಕುರಿತು ಸಭಿಕರ ಪರವಾಗಿ ಶಾಂತಾ ಕುಂದಗೋಳ, ಕವಿತಾ ಮರಿಗೌಡರ, ವಿಜಯಾ ಚನ್ನಶೆಟ್ಟಿ ಅನಿಸಿಕೆ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಬಸವ ಸಾಮೂಹಿಕ ಪ್ರಾರ್ಥನೆ ಮತ್ತು ಬಸವ ಮಂಗಲ ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಸಂಗೀತಾ ನಾಖೋಡ, ಸುನಂದಾ ಜ್ಯಾನೋಪಂತರ, ಗೌರಿ ಜಿರಂಕಳಿ ಇವರಿಗೆ ಬಹುಮಾನ ನೀಡಲಾಯಿತು. ದಾಸೋಹ ಸೇವೆ ಸಲ್ಲಿಸಿದ ಜಿ.ಪಿ. ಕಟ್ಟಿಮನಿ, ವಿ.ಎಂ. ಮುಂದಿನಮನಿ, ವೀಣಾ ಅಕ್ಕಿ, ಸುಮಿತ್ರಾ ಎನ್.ಭಾಸಲಾಪೂರರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಿರಿಜಕ್ಕ ನಾಲತ್ವಾಡಮಠ `ಮೀಸಲು’ ಕುರಿತು ಹಾಡು ಹಾಡಿದರು. ಸುನಂದಾ ಜ್ಯಾನೋಪಂತರ ವಚನ ಸಂಗೀತ ಮಾಡಿದರು. ಜಯಶ್ರೀ ವಸ್ತçದ ಮತ್ತು ಸಂಗಡಿಗರು `ಬಸವಲಿಂಗ’ದ ಮಹಿಮೆ ಕುರಿತಾದ ಗೀತೆ ಹೇಳಿದರು.

ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷೆ ಅನ್ನಪೂರ್ಣ ವರವಿ, ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಬಸವ ಯೋಗ ಚಿಂತನ ಕೂಟದ ಖಜಾಂಚಿ ಡಾ. ಎಂ.ವಿ. ಐಹೊಳ್ಳಿ ಉಪಸ್ಥಿತರಿದ್ದರು. ಸಭಾಂಗಣದಲ್ಲಿ ವಿ.ಪಿ. ಸವಡಿ, ಡಾ. ಎ.ಡಿ. ಹುಳಪಲ್ಲೆ, ಎಸ್.ಎನ್. ಹಕಾರಿ, ರವಿ ಹುಡೇದ, ಕೆ.ಎಫ್. ಕುಂಬಾರ, ಶೋಭಾ ಮುಳಗುಂದ, ಗಿರಿಜಾ ಅಂಗಡಿ, ಪ್ರೇಮಾ ಗಾಣಿಗೇರ, ಸುಮಾ ಸುರೇಬಾನ, ಕಸ್ತೂರಿ ಮರಿಗೌಡರ, ಪಾರ್ವತಿ ಭೂಮಾ, ವಿಜಯಲಕ್ಷ್ಮೀ ಮೇಕಳಿ, ಶಕುಂತಲಾ ಬ್ಯಾಳಿ ಮುಂತಾದವರಿದ್ದರು.

ವೀಣಾ ಅಕ್ಕಿ ಸಾಮೂಹಿಕ ಬಸವ ಪ್ರಾರ್ಥನೆ ತಿಳಿಸಿದರು. ಸುಲೋಚನಾ ಐಹೊಳ್ಳಿ ಧರ್ಮ ಗ್ರಂಥ ಪಠಣ ಮಾಡಿದರು. ಬಿ.ಬಿ. ತೋಟಗೇರ ಸ್ವಾಗತಿಸಿದರು. ಕೆ.ಎಸ್. ಪಲ್ಲದ ಕಾರ್ಯಕ್ರಮ ನಿರೂಪಿಸಿದರು.ಎಸ್.ಬಿ. ಗೌಡರ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಮತ್ತು ಸಾಪ್ತಾಹಿಕ ವಚನ ಶ್ರಾವಣ ಸೇವಾ ಸಮಿತಿ ಅಧ್ಯಕ್ಷ ಡಾ. ಎಸ್.ಕೆ. ನಾಲತ್ವಾಡಮಠ ಮಾತನಾಡಿ, ನಾವಿಂದು ಯಾವುದಾದರೊಂದು ಪ್ರಸಂಗ ನಿಮಿತ್ತ ಕಾರ್ಯಕ್ರಮ ನಡೆಸದೆ ಸಮಾಜೋನ್ನತಿಗೆ ಸಹಕಾರಿಯಾಗುವ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮವು ತ್ರಿಗುಣಾದಿಗಳಿಂದ ಪರಿವತಿರ್ತನಾಗಲು ಸಹಕಾರಿಯಾದ್ದು ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here