ಕಪ್ಪತ್ತಗಿರಿ ಸಾಹಿತ್ಯ ಫೌಂಡೇಶನ್ ವತಿಯಿಂದ ಅಕ್ಕಮಹಾದೇವಿ ಜಯಂತಿ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಪ್ಪತ್ತಗಿರಿ ಫೌಂಡೇಶನ್ ಹಾಗೂ ಕಪ್ಪತ್ತಗಿರಿ ಪ್ರಕಾಶನದ ಕಚೇರಿಯಲ್ಲಿ ಸರಳ ಸಜ್ಜನಿಕೆಯ ವಚನ ಸಾಹಿತ್ಯದ ಸಾದ್ವಿ, ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಕಾರ್ಯಾಧ್ಯಕ್ಷ, ಕನ್ನಡ ಅಭಿಮಾನಿ, ಸಮಾಜ ಸೇವಕ ಮಲ್ಲಿಕಾರ್ಜುನ ಖಂಡಮ್ಮನವರ ವಹಿಸಿದ್ದರು. ಅತಿಥಿಗಳಾಗಿ ಸರೋಜಾ ಹುಯಿಲಗೋಳ, ಸಂಪದ ಹುಯಿಲಗೋಳ ಹಾಗೂ ಕಪ್ಪತ್ತಗಿರಿ ಫೌಂಡೇಶನ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ, ಆಧ್ಯಾತ್ಮಿಕ ಚಿಂತಕಿ ದ್ಯಾಮವ್ವ ಬಸಪ್ಪ ಕಟಗೇರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ಮಾತನಾಡಿದರು. ಸೌಮ್ಯ ಪ್ರಾರ್ಥಿಸಿದರು. ಮಹಾಲಕ್ಷ್ಮಿ ಇಟಗಿಮಠ ವಂದಿಸಿದರು.


Spread the love

LEAVE A REPLY

Please enter your comment!
Please enter your name here