ಬಾಲಿವುಡ್‌ನಲ್ಲಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಭಾರೀ ಬಿಗ್ ಅನೌನ್ಸ್‌ಮೆಂಟ್ ಒಂದು ಹೊರಬಿದ್ದಿದೆ. ಅಕ್ಷಯ್ ಕುಮಾರ್ ಹಾಗೂ ರಾಣಿ ಮುಖರ್ಜಿ ‘ಓ ಮೈ ಗಾಡ್–3’ ಸಿನಿಮಾಗಾಗಿ ಕೈಜೋಡಿಸುತ್ತಿದ್ದು, 2026ಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಂತಾಗಿದೆ.
ಇದಕ್ಕೂ ಮೊದಲು ‘ಓ ಮೈ ಗಾಡ್’ ಪಾರ್ಟ್–1 ಮತ್ತು ಪಾರ್ಟ್–2 ಧಾರ್ಮಿಕ ವಿಚಾರಗಳನ್ನು ನೇರವಾಗಿ ಪ್ರಶ್ನಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಈಗ ಆ ಸರಣಿಯ ಮೂರನೇ ಭಾಗವೂ ಅಧಿಕೃತವಾಗಿ ಸೆಟ್ಟೇರಲು ಸಿದ್ಧವಾಗಿದ್ದು, ಈ ಬಾರಿ ಕಥೆ ಇನ್ನಷ್ಟು ಪವರ್‌ಫುಲ್ ಆಗಿರಲಿದೆ ಎನ್ನಲಾಗ್ತಿದೆ.
‘ಓ ಮೈ ಗಾಡ್–3’ನಲ್ಲಿ ಅಕ್ಷಯ್ ಕುಮಾರ್ ಜೊತೆಗೆ ರಾಣಿ ಮುಖರ್ಜಿ ಕಾಣಿಸಿಕೊಳ್ಳುತ್ತಿರುವುದು ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಡಬಲ್ ಮಾಡಿದೆ. ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಸಿನಿಮಾ ಈಗಾಗಲೇ ಟ್ರೆಂಡ್ ಆಗುತ್ತಿದೆ.
ಅಮಿತ್ ರೈ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಬಾರಿ ಹಿಂದಿನ ಎರಡು ಭಾಗಗಳಿಗಿಂತಲೂ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ತಯಾರಾಗಲಿದ್ದು, ಅತಿದೊಡ್ಡ ತಾರಾಗಣ, ಭರ್ಜರಿ ಪ್ರೊಡಕ್ಷನ್ ಮೌಲ್ಯ ಹಾಗೂ ಹಲವು ಸರ್ಪ್ರೈಸ್‌ಗಳೊಂದಿಗೆ ‘ಓ ಮೈ ಗಾಡ್–3’ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗಿದೆ.



