ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಹಾಗೂ ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಆಪರೇಷನ್ ಸಿಂಧೂರ್ ಸಿನಿಮಾಗಾಗಿ ಇಬ್ಬರು ಫೈಟ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ನೈಜ ಘಟನೆಯ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಿನಿಮಾ ಮಾಡಲು ಅಕ್ಷಯ್ ಕುಮಾರ್ ಮತ್ತು ವಿಕ್ಕಿ ಕೌಶಲ್ ನಡುವೆ ಪೈಪೋಟಿ ನಡೆಯುತ್ತಿದೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಇದು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿ ಇದು ಸುಳ್ಳು ಸುದ್ದಿ ಎಂದಿದ್ದಾರೆ. ಈ ಸಿನಿಮಾಗಾಗಿ ಇಬ್ಬರೂ ಫೈಟ್ ಮಾಡ್ತಿಲ್ಲ. ಅಕ್ಷಯ್ ಮತ್ತು ವಿಕ್ಕಿ ತಾವು ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ.
ಪಾಕ್‌ಗೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇದನ್ನೇ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರಲ್ಲಿ ಪೈಪೋಟಿ ನಡೆಯುತ್ತಿದೆ. ಈ ವೇಳೆ, ಅಕ್ಷಯ್ ಮತ್ತು ವಿಕ್ಕಿ ಸಿನಿಮಾ ಮಾಡಲು ಕಿತ್ತಾಡುತ್ತಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಹೌಸ್‌ಫುಲ್ 5, ಜಾಲಿ ಎಲ್‌ಎಲ್‌ಬಿ 3, ವೆಲ್‌ಕಮ್ ಟು ದಿ ಜಂಗಲ್, ಕಣ್ಣಪ್ಪ ಸೇರಿದಂತೆ ಹಲವು ಚಿತ್ರಗಳು ಟ್ವಿಂಕಲ್ ಖನ್ನಾ ಕೈಯಲ್ಲಿವೆ. ವಿಕ್ಕಿ ಕೌಶಲ್ ಛಾವಾ ಸಕ್ಸಸ್ ಬಳಿಕ ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.