ಹಾವೇರಿ:- ತಮ್ಮ ಮೇಲೆ ರೌಡಿಶೀಟ್ ಕೇಸ್ ಇದೆ ಎಂಬ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಅವರು,2016 ರಲ್ಲಿ ನನ್ನ ಮೇಲೆ ಪ್ರಕರಣ ದಾಖಲು ಇತ್ತು. ಹೈಕೋರ್ಟ್ ನಿಂದ ಎಲ್ಲಾ ಕೇಸ್ ರದ್ದಾಗಿದೆ. ರೌಡಿ ಶೀಟರ್ ಕ್ಲೋಸಿಂಗ್ ಲೆಟರ್ ಕೂಡ ನನ್ನ ಬಳಿ ಇದೆ.
ನನ್ನ ಮೇಲೆ ಮಾಜಿ ಸಿಎಂ ಹಲವಾರು ಆರೋಪ ಮಾಡಿದ್ದಾರೆ. ಅಕ್ರಮ ಲೇಔಟ್ ಮಾಡಿರೋದಾಗಿ ಹೇಳ್ತಾರೆ. ಅವರೇ ಸಿಎಂ ಇದ್ದರು, 20 ವರ್ಷ ಶಾಸಕರಿದ್ದರು. ನನ್ನ ಮೇಲೆ ಕ್ರಮ ಮಾಡಿಸಬಹುದಿತ್ತು. ಕೈಲಾಗದ ಶತ್ರುವಿನ ಅಂತಿಮ ಅಸ್ತ್ರ ಅಪಪ್ರಚಾರ. ಸೋಲಿನ ಭಯದಿಂದ ಸುಳ್ಳು ಆರೋಪ ಮಾಡ್ತಿದ್ದಾರೆ.
ಮಾಜಿ ಸಿಎಂ ಆದಂಥವರು ಈ ರೀತಿ ಆರೋಪ ಮಾಡೋದು ಸರಿಯಲ್ಲ. ಕಳೆದ ಚುನಾವನೆಗಳಲ್ಲಿಯೂ ಅಪ ಪ್ರಚಾರ ಮಾಡಿದ್ದರು. ಅವರ ಗಿಮಿಕ್ ನಡೆಯೋಲ್ಲ. ಕ್ಷೇತ್ರಕ್ಕೆ, ಪಕ್ಷಕ್ಕೆ ಬೊಮ್ಮಾಯಿ ದ್ರೋಹ ಮಾಡಿದ್ದಾರೆ.
ವಿಡಿಯೋ ಬಗ್ಗೆ ಬೊಮ್ಮಾಯಿ ಯಾಕೆ ಸ್ಟೇ ತಗೊಂಡರು. ತಪ್ಪು ಮಾಡದೇ ಇದ್ದಲ್ಲಿ ಸ್ಟೇ ಯಾಕೆ ತಗೊಂಡರು. ಮಗನ ಮೇಲೆ ಬಿಟ್ ಕಾಯಿನ್ ಹಗರಣ ಆರೋಪವಿದೆ.
ಮಾತಾಡಣಕ್ಕೂ ಪೂರ್ವದಲ್ಲಿ ಸತ್ಯಾಸತ್ಯತೆ ಹೊರ ಹಾಕಿ ಎಂದು ಶಿಗ್ಗಾಂವ್ ದಲ್ಲಿ ಯಾಸಿರ್ ಪಠಾಣ್ ಹೇಳಿಕೆ ಕೊಟ್ಟಿದ್ದಾರೆ.