ಕಲಬುರಗಿ: ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಹಿನ್ನೆಲೆಯಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Advertisement
ಜಿಲ್ಲೆಯ ಭಾರತ್ ನಗರ ತಾಂಡಾ ನಿವಾಸಿ ಶಾರದಾಬಾಯಿ (65) ಹಾಗೂ ಉದನೂರ್ ತಾಂಡಾ ನಿವಾಸಿ ದಶರಥ ರಾಠೋಡ್ (50) ಮೃತ ರೋಗಿಗಳು ಆಗಿದ್ದು, ಟಿಬಿ ರೋಗದಿಂದ ಬಳಲುತ್ತಿರುವ ಇಬ್ಬರು ರೋಗಿಗಳು ಒಂದೇ ಒಂದು ಗಂಟೆ ಅಂತರದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಂಗಳವಾರ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದ ಶಾರದಾಬಾಯಿ ಸಂಜೆ ಸುಮಾರಿಗೆ ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಬೆಳಗ್ಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ದಶರಥ್ ರಾಠೋಡ್ ಕೂಡ ಟಿಬಿ ರೋಗದಿಂದ ಬಳಲುತ್ತಿದ್ದರು. ವೈದ್ಯರನ್ನು ಕರೆದ್ರು ಕೂಡ ಬಾರದ ಹಿನ್ನಲೆಯಲ್ಲಿ ರೋಗಿಗಳು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.