ಗದಗ: ಧರ್ಮಸ್ಥಳ ಸಂಘದ ವಿರುದ್ಧ ಗಂಭೀರ ಆರೋಪ ಮಾಡಿದ ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಿರೀಶ್ ಮಟ್ಡಣ್ಣವರ ವಿರುದ್ಧ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗಿರೀಶ್ ಮಟ್ಡಣ್ಣವರ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗದಗ ನಗರದ ಪ್ರತಿಕಾ ಭವನದ ಆವರಣದಲ್ಲಿ ನಡೆದಿದೆ.
ರಾಜ್ಯದಲ್ಲಿ ಇತ್ತೀಚಿಗೆ ವರದಿ ಆಗುತ್ತಿರುವ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹಿನ್ನೆಲೆಯಲ್ಲಿ ಸುಗ್ರಿವಾಜ್ಞೆ ಜಾಗೃತಿ ಕುರಿತು ಸುದ್ದಿಗೋಷ್ಠಿ ನಡೆಸಿ SKDRDP ಸಂಸ್ಥೆ ವಿರುದ್ಧ ಗಿರೀಶ ಮಟ್ಟೆಣ್ಣವರ ಹಾಗೂ ರೈತ ಮುಖಂಡರು ಕಿಡಿಕಾರಿದ್ದರು.
ಧರ್ಮಸ್ಥಳ ಸಂಘದಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದು, ಇದರಿಂದ ಸಾಕಷ್ಟು ಜನ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ವೇಳೆ ಪತ್ರಿಕಾ ಭವನಕ್ಕೆ ಧರ್ಮಸ್ಥಳ ಸಂಘದ ಮಹಿಳಾ ಗುಂಪಿನ ಮುಖ್ಯಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಗಿರೀಶ ಮಟ್ಟಣ್ಣವರನ್ನು ಹೊರಗೆ ಕಳುಹಿಸಿ ಆತನ ಪ್ರಶ್ನೆಗೆ ನಾವು ಉತ್ತರಿಸುತ್ತೇವೆ ಎಂದು ನೂರಾರು ಮಹಿಳೆಯರು ಆಕ್ರೋಶ ಹೊರಹಾಕಿದರು.ಇನ್ನೂ ಗಿರೀಶ್ ಮಟ್ಟಣ್ಣವರ ಕಾರ್ ಸುತ್ತುವರೆದು ಮಹಿಳೆಯರು ನಿಂತಿದ್ದರಿಂದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು. ಈ ವೇಳೆ ಪಟ್ಟು ಬಿಡದ ಮಹಿಳೆಯರಿಂದ ಕೆಲಕಾಲ ಹೈಡ್ರಾಮಾ ಸೃಷ್ಠಿಯಾಗಿತ್ತು, ಈ ಸಂದರ್ಭದಲ್ಲಿ ಪೊಲೀಸರು ಹರಸಾಹಸ ಪಟ್ಟು ಗಿರೀಶ್ ಮಟ್ಟಣ್ಣವರ ಹೊರ ಹೋಗಲು ಅನುಕೂಲ ಕಲ್ಪಿಸಿದರು.



