ಬೆಂಗಳೂರು:- ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಡಿಜಿಪಿಯಾಗಿ ಮುಂಬಡ್ತಿ ಪಡೆದಿದ್ದು, ಕ್ರಿಮಿನಲ್ ಗಳಿಗೆ ನಡುಕ ಶುರುವಾಗಿದೆ.
ಕಾರಾಗೃಹ ಅಕ್ರಮ ಹೆಚ್ಚಾದ ಬೆನ್ನಲ್ಲೇ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಕಾರಾಗೃಹದ ಎಡಿಜಿಪಿ ದಯಾನಂದ್ ಅವರನ್ನು ಎಡಿಜಿಪಿ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಇತ್ತೀಚೆಗೆ ಜೈಲಿನಲ್ಲಿನ ಅಕ್ರಮ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಮುಖ ಬದಲಾವಣೆಯನ್ನು ಮಾಡಿದೆ. ಅಲೋಕ್ ಕುಮಾರ್ ನೇಮಕವಾದ ಸುದ್ದಿ ಹೊರಬಿದ್ದ ಕೂಡಲೇ ಜೈಲಿನಲ್ಲಿರುವ ಕ್ರಿಮಿಗಳಲ್ಲಿ ಆತಂಕವೂ ಕಾಣಿಸಿಕೊಂಡಿದೆ. ಇದಕ್ಕೂ ಮೊದಲು ಕಾರಾಗೃಹ ಎಡಿಜಿಪಿಯಾಗಿದ್ದ ದಯಾನಂದ್ ಅವರನ್ನು ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿದೆ.



