ಅಂಬರೀಶ್ ಅಭಿಮಾನಿಗಳು, ನನ್ನ ಫಾಲೋವರ್ಸ್‌ಗಳು ನನ್ನ ಜೊತೆ ಇದ್ದಾರೆ: ಸುಮಲತಾ

0
Spread the love

ಮಂಡ್ಯ: ಎಂಪಿ ಚುನಾವಣೆ ಸಂಬಂಧ ನಾನು ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಸರಿಯಾದ ಸಮಯ ಸಂದರ್ಭ ನೋಡಿ, ಎಲ್ಲವೂ ಅಂತಿಮವಾದಾಗ ಹೇಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

Advertisement

ಈಗ ನಾನು ಚುನಾವಣೆ ಸಂಬಂಧ ಮಾತಾಡಲ್ಲ. ಮಂಡ್ಯದಲ್ಲಿ ಚುನಾವಣೆ ನಿಲ್ಲಲ್ಲ, ನಿಲ್ಲುತ್ತೇನೆ ಎಂಬುದರ ಬಗೆಗೆ ಈಗಾಗಲೇ ಹಲವು ಬಾರಿ ಮಾತಾಡಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಸೀಟು ಹಂಚಿಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗದೆ ನಾನು ಮಾತಾಡುವುದು ಸರಿಯಲ್ಲ.

ಮಂಡ್ಯದ ಜನ ನನ್ನ ಜೊತೆಗೆ ಇದ್ದಾರೆ. ಅಂಬರೀಶ್ ಅಭಿಮಾನಿಗಳು, ನನ್ನ ಫಾಲೋವರ್ಸ್​​ಗಳು ನನ್ನ ಜೊತೆ ಇದ್ದಾರೆ. ನಾನು ಯಾರ ಬಳಿಯೂ ಹೋಗಿ ಟಿಕೆಟ್ ಕೇಳಿಲ್ಲ. ಈಗಲೂ ಅಷ್ಟೇ ಯಾರನ್ನೂ ಕೇಳಲ್ಲ.

ನಾನು ಎಂಪಿ ಸ್ಥಾನ ಇಲ್ಲದೇ ಇರುವಾಗಲೇ ಪಕ್ಷಗಳ ಆಫರ್ ನಾನು ಸ್ವೀಕರಿಸಿಲ್ಲ. ಸದ್ಯ ಎಂಪಿ ಆಗಿದ್ದೀನಿ. ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಲಿ? ರಾಜಕಾರಣಕ್ಕಾಗಿ ಇಲ್ಲಿಗೆ ಬಂದಿಲ್ಲ. ಮಂಡ್ಯದ ಜನರಿಗಾಗಿ ಇಲ್ಲಿಗೆ ಬಂದಿರುವುದು ಎಂದರು.


Spread the love

LEAVE A REPLY

Please enter your comment!
Please enter your name here