ಅಂಬೇಡ್ಕರ್ ತತ್ವ-ಸಿದ್ಧಾಂತಗಳು ಸದಾ ಪ್ರಸ್ತುತ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶೋಷಿತ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳು ಇಂದಿಗೂ ಜೀವನಕ್ಕೆ ಪ್ರಸ್ತುತವಾಗಿವೆ ಎಂದು ಶಿಕ್ಷಕಿ ಎಸ್.ಡಿ. ಪಂಡಿತ ಹೇಳಿದರು.

Advertisement

ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮಹಿಳೆಯರಿಗೆ ಸಮಾನ ಹಕ್ಕು, ಕಾಯ್ದೆ, ಪ್ರತಿಯೊಬ್ಬರಿಗೂ ಶಿಕ್ಷಣ, ಸಮಾನತೆಗಾಗಿ ಹೋರಾಡಿದ ಮಾಹಾನ್ ನಾಯಕರಾಗಿ ಬೆಳಕು ಚೆಲ್ಲಿದವರು ಬಾಬಾಸಾಹೇಬರು. ಇಂತಹ ನಾಯಕರ ತತ್ವ ಸಿದ್ಧಾಂತಗಳನ್ನು ಸದಾ ಪ್ರಸ್ತುತವಾದದ್ದು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಶಿಕ್ಷಕರಾದ ಎಂ.ಎಂ. ಮೇಗಲಮನಿ, ಕೆ.ಎಂ. ಹೆರಕಲ್ಲ, ಎಚ್.ಆರ್. ಭಜಂತ್ರಿ, ಟಿ. ವೀಣಾ, ಎಸ್.ಡಿ. ಪಂಡಿತ, ನಂದಾ ಮಟ್ಟಿ, ರೇಣುಕಾ ಪರ್ವತಗೌಡ್ರ, ಸಂಕಮ್ಮಾ ಯಳವತ್ತಿ ಇದ್ದರು.


Spread the love

LEAVE A REPLY

Please enter your comment!
Please enter your name here