ಅಂಬಿಗ, ಸುಣಗಾರ, ಸಮಾಜದವರು ಸಂಘಟಿತರಾಗಿ

0
ambiga samaja
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಬಹಳ ಅವಶ್ಯಕ. 35ನೇ ವಾರ್ಡಿನಲ್ಲಿ ವಾಸಿಸುವ ಸಮಾಜ ಬಾಂಧವರು ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿ ಎಂದು ಸಮಾಜದ ಜಿಲ್ಲಾಧ್ಯಕ್ಷರಾದ ರಾಮಣ್ಣ ಇರಕಲ್ಲ ಕರೆ ನೀಡಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಾಜ ಟ್ರಸ್ಟ್ ಪ್ರಧಾನ ಕಾರ್ಯದಶಿ ಸಂಗಮೇಶ ಹಾದಿಮನಿ ಮಾತನಾಡಿ, ಸಮಾಜದ ಯುವಕರು ಶರಣ ಸಂಸ್ಕೃತಿ ಅಳವಡಿಸಿಕೊಂಡು, ಉತ್ತಮ ವೈಚಾರಿಕತೆ ಬೆಳೆಸಿಕೊಂಡು, ಗ್ರಾಮ ಘಟಕ ಹಾಗೂ ತಾಲೂಕ ಘಟಕ ಸಮಾಜದ ಜನಜಾಗೃತಿ ಮಾಡಿ ಬಡ ಜನರ ಬದುಕು ಬದಲಾವಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದರು.

ಸಮಾಜ ಟ್ರಸ್ಟ್ನ ಸದಸ್ಯ ಮಲ್ಲು ಬಾರಕೇರ ಮಾತನಾಡಿದರು. ಈ ಸಂದರ್ಭದಲ್ಲಿ ಸದಸ್ಯರಾದ ಮಲ್ಲು ಬಾರಕೇರ, ಶಿವದೇವ ಹಾದಿಮನಿ, ಸಹ ಕಾರ್ಯದಶಿ ರವಿಕುಮಾರ ಗುಡಿಸಾಗರ, ಯುವ ಘಟಕದ ಅಧ್ಯಕ್ಷ ಮಂಜುನಾಥ ಗುಡಿಸಾಗರ, ಹರೀಶ ಬಾರಕೇರ, ರಾಜು ಬಾರಕೇರ, ಮಂಜು ಅಂಬಿಗೇರ, ಮಾನ್ವಿ, ಚಂದ್ರಶೇಖರ್ ಬಾರಕೇರ, ರಮೇಶ ಬೆನಕಲ್ಲ, ಮಂಜು ಹಂಪಸಾಗರ, ರಾಮಣ್ಣ ಬಾರಕೇರ, ತಿರಲಾಪುರ, ಶಹರ ಘಟಕ ಸಂಘಟನಾ ಕಾರ್ಯದಶಿ ರಾಜು ಪೂಜಾರ ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here