ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ: ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಟ್ರಸ್ಟ್ ಮತ್ತು ಗದಗ ತಾಲೂಕಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಗದಗ ತಾಲೂಕ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜೆ.ಬಿ. ಗಾರವಾಡ ಮಾತನಾಡಿ, ಕಲಬುರ್ಗಿ ಜಿಲ್ಲೆ ಶಹಬಾದ ತಾಲೂಕಿನ ಮುತ್ತಗ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿ ಅಟ್ಟಹಾಸವನ್ನು ಮೆರೆದ ಕಿಡಿಗೇಡಿಗಳ ಕೃತ್ಯವನ್ನು ಅಂಬಿಗರ ಸಮಾಜ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತಾಲೂಕಾಧ್ಯಕ್ಷ ಡಾ. ಗಣೇಶ ಸುಲ್ತಾನಪೂರ ಮಾತನಾಡಿ, ಶ್ರೇಷ್ಠ ಸಮಾಜ ಸುಧಾರಕರ ಪುತ್ಥಳಿಗೆ ಇಂತಹ ಅಪಮಾನ ಮಾಡಿರುವುದು ಇಡೀ ಮನುಕುಲಕ್ಕೆ ಮಾಡಿರುವ ಅಪಮಾನವಾಗಿದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಇದಕ್ಕೆ ವಿಶೇಷ ಕಾನೂನು ಜಾರಿ ಮಾಡಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಟ್ರಸ್ಟ್‌ನ ಸದಸ್ಯರಾದ ಮಂಜುನಾಥ ಸುಣಗಾರ, ಶ್ರೀಧರ ಸುಲ್ತಾನಪುರ, ಸುಭಾಸ ಕದಡಿ ಸೇರಿದಂತೆ ಮುಖಂಡರಾದ ಪ್ರಕಾಶ ಪೂಜಾರ, ಬಸವರಾಜ ಜಿಗಳೂರ, ಹನಮಂತಪ್ಪ ಮಾನ್ವಿ, ಗೋಪಾಲ ಲಕ್ಷ್ಮೇಶ್ವರ, ಕೃಷ್ಣಾ ಬಾರಕೇರ, ವಿನೋದ ಜಕನೂರ, ನೀಲಕಂಠ ಗುಡಿಸಾಗರ, ಕಿರಣ ಕದಡಿ, ಜಿ.ಬಿ. ನರಗುಂದ, ನಾಗರಾಜ ಗುಡಿಸಾಗರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here